Saturday, February 22, 2020

ಬಾಳೆಹಣ್ಣಿನ ಈ 12 ವೈಶಿಷ್ಟ್ಯ


1. ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ, ಬೇಜಾರು, ಮುಂತಾದವೆಲ್ಲ ಕಡಿಮೆಯಾಗುತ್ತವೆ. ಈ ಸೆರಟೋನಿನ್ ಮಾತ್ರೆಗಳೂ ಈಗ ಸಿಗುತ್ತವೆ. ಆದರೆ ನೇರವಾಗಿ ಬಾಳೆಹಣ್ಣು ತಿನ್ನುವುದೇ ಒಳ್ಳೇದು ಅಂತ ಡಾಕ್ಟರುಗಳೂ ಒಪ್ತಾರೆ.

2. ಬಾಳೆಹಣ್ಣು ದೇಹಕ್ಕೆ ಬಹಳ ಶಕ್ತಿ ಕೊಡುತ್ತೆ. ಎರಡೇ ಎರಡು ತಿಂದರೆ ಸಾಕು, 90 ನಿಮಿಷ ಜಿಮ್ಮಲ್ಲಿ ಕಸರತ್ತು ಮಾಡಕ್ಕೆ ಬೇಕಾಗುವಷ್ಟು ಶಕ್ತಿ ಸಿಗುತ್ತೆ. ಕೋತಿಗಳಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತು ತಾನೆ?

3. ಹಿಂದಿನ ದಿನ ಕುಡಿದಿದ್ದರೆ ಬೆಳಗ್ಗೆ ಬಾಳೆಹಣ್ಣು ತಿನ್ನೊದರಿಂದ ಕುಡಿತದ ಅಮಲು ಕಡಿಮೆಯಾಗುತ್ತೆ. ಯಾಕಂದ್ರೆ ಅದರಲ್ಲಿ ಪೊಟಾಸಿಯಂ ಇರುತ್ತದೆ.

4. ಮನುಷ್ಯನ DNAಗೂ ಬಾಳೆಹಣ್ಣಿನ DNAಗೂ 50% ಸಾಮ್ಯತೆ ಇರುತ್ತಂತೆ! ಯಾರಿಗಾದರೂ ಬಾಳೆಹಣ್ಣು ಕೊಟ್ಟರೆ ಅದರಲ್ಲಿ ನಮ್ಮ ಅಂಶವೂ ಇರುತ್ತೆ ಅಂತ ಆಯಿತು!

5. ದೇಹದಲ್ಲಿ ಪೊಟಾಸಿಯಂ ಮಟ್ಟ ಮಿತಿಮೀರಿ ಮನುಷ್ಯ ಸಾಯಕ್ಕೆ 480 ಬಾಳೆಹಣ್ಣು ತಿನ್ನಬೇಕಾಗುತ್ತೆ. ಅಂದರೆ ಎಂತೆಂಥಾ ಹೊಟ್ಟೇಬಾಕರಿಗೂ ಬಾಳೆಹಣ್ಣಿಂದ ಏನೂ ಆಗಲ್ಲ, ಎಷ್ಟು ತಿಂದರೂ ತೊಂದರೆ ಇಲ್ಲ ಅಂತ ಅರ್ಥ :-)

6. ನೈಸರ್ಗಿಕವಾಗಿ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಒತ್ತಡದಿಂದ ಆಗುವ ಎಲ್ಲಾ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೂ ಇದು ಸಿದ್ಧೌಷಧ. ಅದಕ್ಕೇ ಬಾಳೆಹಣ್ಣು ಪ್ರಪಂಚದಲ್ಲೆಲ್ಲ ಜನ ಇಷ್ಟ ಪಟ್ಟು ತಿನ್ನೊದು

7. ಬಾಳೆಹಣ್ಣಲ್ಲಿ ಒಂದು ಚೂರೂ ಕೊಬ್ಬು, ಸೋಡಿಯಂ ಅಥವಾ ಕೊಲೆಸ್ಟ್ರಾಲ್ ಇರೋದಿಲ್ಲ. ಬದಲಾಗಿ ನಾರಿನಂಶ, ವಿಟಮಿನ್ ಸಿ ಮತ್ತು ಬಿ-6, ಪೊಟಾಸಿಯಂ ಮತ್ತು ಮ್ಯಾಂಗನೀಸ್ ಇರುತ್ತವೆ. ಎಂದರೆ ಬಹಳ ಒಳ್ಳೇದು ಅಂತ ಅರ್ಥ!

8. ಬಾಳೆಹಣ್ಣು ತಿನ್ನುವುದರಿಂದ ಹೃದಯಾಘಾತ, ಲಕ್ವಾ ಹೊಡೆಯುವುದು, ಕ್ಯಾನ್ಸರ್ ಬರುವುದು - ಇವೆಲ್ಲದರ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಯಾಕೆ ಕಾಯ್ತಿದೀರಿ? ಬೇರೆಬೇರೆ ರೀತಿಯಲ್ಲಿ ಈ ಹಣ್ಣು ತಿನ್ನೊ ಪ್ರಯೋಗಗಳನ್ನ ಮಾಡಿ!

9. ಬಾಳೆಹಣ್ಣಲ್ಲಿ 75% ನೀರು ತುಂಬಿರುತ್ತದೆ! ಗೊತ್ತಾಗುವುದೇ ಇಲ್ಲ, ಅಲ್ಲವಾ?

10. ಪ್ರಪಂಚದ 100ಕ್ಕಿಂತ ಹೆಚ್ಚು ದೇಶಗಳಲ್ಲಿ ಬಾಳೆಹಣ್ಣು ಬೆಳೆಯುತ್ತದೆ. ಸುಮಾರು 300 ಬೇರೆಬೇರೆಯ ತಳಿಗಳು ಸಿಗುತ್ತವೆ.

11. ಬಾಳೆಗಿಡ ನಿಜಕ್ಕೂ ಒಂದು ಗಿಡ. 20-25 ಅಡಿ ಎತ್ತರ ಬೆಳೆದರೂ ಇದನ್ನ ಮರ ಅನ್ನೊದಕ್ಕೆ  ಆಗಲ್ಲ, ಯಾಕಂದರೆ ಬೇರೆ ಮರದಂತೆ ಇದಕ್ಕೆ ಮರದ ಕಾಂಡ ಇರೋದಿಲ್ಲ, ದಿಂಡಿರುತ್ತದೆ. ಅಷ್ಟೇ ಅಲ್ಲ, ಈ ದಿಂಡನ್ನು ಕೂಡ ನಾವು ತಿನ್ತೀವಿ.

12. ಬಾಳೆ ಎಲೆ ಮೇಲೆ ಊಟ ಮಾಡುವುದರಿಂದ ಮೇಲಿನ ಹಲವು ಒಳ್ಳೆಯ ಅಂಶಗಳ ಲಾಭ ಪಡೆದುಕೊಳ್ಳಬಹುದು


Sunday, February 9, 2020

ಧನಿಯಾದ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು!!!


ಧನಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಧನಿಯಾ ಎಲ್ಲರಿಗೂ ಗೊತ್ತಿರಲೇ ಬೇಕಾದ ಒಂದು ಸಾಂಬಾರು ಪದಾರ್ಥ ಯಾಕಂದ್ರೆ ಧನಿಯಾ ಇಲ್ಲದೆ ಯಾವ ಮಸಾಲೆಯೂ ರುಚಿಸುವುದಿಲ್ಲ ಪ್ರತಿನಿತ್ಯ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಧನಿಯಾ ಪುಡಿಯ ಪಾತ್ರ ಅದರ ರುಚಿ ಇದ್ದೆ ಇರುತ್ತದೆ ಆದ್ದರಿಂದ ಧಾನಿಯಾಕ್ಕೆ ಅದರದ್ದೇ ಆದ ಮಹತ್ವವೂ ಇದೆ. ಧನಿಯಾ ರುಚಿ ಇಲ್ಲದ ಸಾರು ಅದೊಂದು ಸಾರೇ ಅಲ್ಲ ಎನ್ನುವ ಮಾತಿದೆ ಹಾಗೆ ಧನಿಯಾ ಆಹಾರದಲ್ಲಿನ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯೂ ಹೌದು ಇನ್ನು ಧನಿಯಾ ಬರಿಯ ಸಾಂಬಾರು ಪದಾರ್ಥ ಮಾತ್ರವಲ್ಲದೆ ಪೋಟಾಸ್ಸಿಯುಮ್ ಕ್ಯಾಲ್ಸಿಯಮ್ ವಿಟಮಿನ್ ಸಿ ಗಳಂತಹ ಪೋಷಕಾಂಶಗಳನ್ನು ತುಂಬಿಕೊಂಡಿದ್ದು ಮೇಗ್ನಿಶಿಯಮ್ ಅಂಶ ಹೆರಳವಾಗಿದ್ದು ಮತ್ತು ಈ ಎಲಾ ಸತ್ವಗಳು ಮಾನವನ ದೇಹದಲ್ಲಿನ ರೋಗಗಳನ್ನು ದೂರ ಮಾಡಲು ಸಹಾಯ ಮಾಡುತ್ತವೆ.

ಇನ್ನು ಧನಿಯಾದ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು!!!

ಮೂರು ಚಮಚ ಧನಿಯಾವನ್ನು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಅದು ಅರ್ಧ ಗ್ಲಾಸ್ ಆಗುವ ವರೆಗೂ ಕುದಿಸಿ ನಂತರ ಅದನ್ನು ಸೋರಿಸಿ ಈ ನೀರನ್ನು ಪ್ರತಿನಿತ್ಯ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಧನಿಯಾದಲ್ಲಿರುವ ಕೆಲವು ಸತ್ವಗಳು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ ಸಂಶೋಧನೆಯ ಪ್ರಾಕಾರ ಯಾವ ವ್ಯಕ್ತಿಯ ದೇಹದಲ್ಲಿ ಕೊಬ್ಬಿನಂಶ ಹೆರಳವಾಗಿರುವುದೋ ಅವರು ಧನಿಯಾದ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು

ಎರಡು ಗ್ಲಾಸ್ ನೀರಿನಲ್ಲಿ ಧನಿಯಾ ಬೀಜ ಜೀರಿಗೆ ಚಹಾದ ಪುಡಿ ಸಕ್ಕರೆ ಹಾಕಿ ಬೆರೆಸಿ ಅದನ್ನು ನಿಯಮಿತವಾಗಿ ಕುದಿಸಿ ಅದನ್ನು ಸೋರಿಸಿ ನಂತರ ಈ ನೀರನ್ನು ಕುಡಿಯುವುದರಿಂದ ಅಸಿಡಿಟಿಯಂತಹ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಸಹ ಶೀಘ್ರದಲ್ಲೇ ಗುಣಮುಖವಾಗುತ್ತದೆ ಹಾಗೂ ಪಚನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಧನಿಯಾದ ನೀರನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ಇರುವ ರೋಗಿಗಳ ದೇಹದಲ್ಲಿನ ಇನ್ಸುಲಿನ್ ಅಂಶ ಕ್ರಮೇಣ ನಿಯಂತ್ರಣದಲ್ಲಿರುವಂತೆ ಕಾಪಾಡುತ್ತದೆ.


ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...