Tuesday, January 21, 2020

ಕಬ್ಬಿಣಾಂಶದ ಕೊರತೆಗೆ ಪರಿಹಾರ


ಮನುಷ್ಯನ ಮೆದುಳು ಅತ್ಯಂತ ಪ್ರಮುಖವಾದ ಅಂಗ. ದೇಹದ ಯಾವುದೇ ಅಂಗಾಂಗಗಳು ಸುಸೂತ್ರವಾದ ಚಲನೆಯನ್ನು ಹೊಂದಬೇಕು ಎಂದರೆ ಮೆದುಳಿನ ಸಂಜ್ಞೆ ಸರಿಯಾಗಿ ಇರಬೇಕು. ಇಲ್ಲವಾದರೆ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುವುದು. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಮಿದುಳಿಗೆ ಪೋಷಣೆ ನೀಡುವ ಮತ್ತು ರಕ್ತವನ್ನು ಹೆಚ್ಚಿಸುವ ಕಬ್ಬಿಣಾಂಶದ ಆಹಾರವನ್ನು ಹೇರಳವಾಗಿ ಸೇವಿಸಬೇಕು. ಆಗ ವ್ಯಕ್ತಿಯು ಉತ್ತಮ ಆರೋಗ್ಯದಿಂದ ಉತ್ಸಾಹ ಶೀಲ ಪ್ರವೃತ್ತಿಯನ್ನು ಹೊಂದಿರುತ್ತಾನೆ.



ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಉತ್ತಮ ಕಬ್ಬಿಣಾಂಶಗಳು ಇದ್ದರೆ ರಕ್ತದಲ್ಲಿ ಕಬ್ಬಿಣಾಂಶದ ಏರಿಕೆ ಆಗುವುದು. ಹಾಗೊಮ್ಮೆ ನಮ್ಮ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದಾದರೆ ಅದು ಅನೀಮಿಯಾ ಅಥವಾ ರಕ್ತಹೀನತೆ ಎನಿಸಿಕೊಳ್ಳುತ್ತದೆ. ಯಾರು ಅಗತ್ಯ ಪ್ರಮಾಣದಷ್ಟು ರಕ್ತವನ್ನು ಹೊಂದಿರುವುದಿಲ್ಲ ಅವರು ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು. ರಕ್ತದಲ್ಲಿ ಕಬ್ಬಿಣಾಂಶದ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ವ್ಯಕ್ತಿ ಮಾನಸಿಕವಾಗಿ ಒತ್ತಡ, ಸಿಟ್ಟು ಹಾಗೂ ಒರಟಾದ ವರ್ತನೆಯನ್ನು ತೋರುವನು.

ಮಹಿಳೆಯರೇ ಹೆಚ್ಚು
ಕೆಲವು ಅಧ್ಯಯನ ಹಾಗೂ ಸಂಶೋಧನೆಯಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಭಾರತದಲ್ಲಿ ಶೇ.50ರಷ್ಟು ಮಹಿಳೆಯರು ರಕ್ತ ಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಬ್ಬಿಣದ ಕೊರತೆ ಇದ್ದಾಗ ರಕ್ತ ಹೀನತೆ ಸಮಸ್ಯೆಯು ಸಾಮಾನ್ಯವಾಗಿ ಕಾಡುವುದು. ರಕ್ತ ಹೀನತೆಯ ಸಮಸ್ಯೆಯಿಂದ ಹೊರ ಬರಬೇಕು ಎಂದರೆ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಹೇರಳವಾಗಿ ಸೇವಿಸಬೇಕು. ನಾವು ನಿತ್ಯ ಸೇವಿಸುವ ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಉತ್ತಮವಾಗಿದ್ದರೆ ದೇಹದಲ್ಲಿ ಸಾಕಷ್ಟು ರಕ್ತ ಪ್ರಮಾಣ ಹೆಚ್ಚುವುದು.

ರಕ್ತ ಹೀನತೆ ಎಂದರೇನು?
ದೇಹದಲ್ಲಿ ಆರೋಗ್ಯಕರವಾದ ಹಿಮಗ್ಲೋಬಿನ್ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಅದನ್ನು ರಕ್ತ ಹೀನತೆ ಎಂದು ಕರೆಯುವರು. ರಕ್ತಹೀನತೆ ಇರುವಾಗ ಆಮ್ಲಜನಕದ ಸಾಗಣೆಗೆ ಅಡ್ಡಿಯಾಗುವುದು. ಅದನ್ನು ಸಾಗಿಸುವ ಸಾಮರ್ಥ್ಯವು ರಕ್ತದ ಕಣಗಳಿಗೆ ಇರುವುದಿಲ್ಲ. ಈ ಸಮಸ್ಯೆಯು ಮಾರಣಾಂತಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು.


ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ
ಎನ್ ಎಚ್ ಎಸ್(ರಾಷ್ಟ್ರೀಯ ಆರೋಗ್ಯ ಸೇವೆ)ನ ಪ್ರಕಾರ ವಯಸ್ಕ ಪುರುಷರಿಗೆ ಪ್ರತಿದಿನ ಸುಮಾರು 8.7 ಮಿ.ಗ್ರಾಂ ಕಬ್ಬಿಣಾಂಶದ ಅಗತ್ಯವಿರುತ್ತದೆ. ವಯಸ್ಕ ಮಹಿಳೆಯರಿಗೆ 14.8 ಗ್ರಾಂ ಕಬ್ಬಿಣಾಂಶದ ಅಗತ್ಯವಿರುತ್ತದೆ. ಅದೇ ಮೌಲ್ಯವು 50ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ 8.9 ಮಿ.ಗ್ರಾಂ ಸಾಕಾಗುವುದು. ಏಕೆಂದರೆ 50 ವರ್ಷ ದಾಟಿದ ಮಹಿಳೆಯರು ಋತುಚಕ್ರಗಳಿಗೆ ಒಳಗಾಗುವುದಿಲ್ಲ. ಜೊತೆಗೆ ರಕ್ತದ ಹಾನಿಯನ್ನು ಅನುಭವಿಸುವುದಿಲ್ಲ.
ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಪೂರೈಕೆಗಾಗಿ ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುವುದು.


ಕಬ್ಬಿಣಾಂಶದ ಕೊರತೆಯಿಂದ ಕಾಡುವ ಆರೋಗ್ಯ ಸಮಸ್ಯೆಗಳು
- ವ್ಯಕ್ತಿಯಲ್ಲಿ ಯಾವುದೇ ಉತ್ಸಾಹ ಹಾಗೂ ಶಕ್ತಿಯುತವಾದ ಭಾವನೆ ಇರುವುದಿಲ್ಲ.
- ಉಸಿರಾಟದ ತೊಂದರೆಯನ್ನು ಅನುಭವಿಸಬೇಕಾಗುವುದು.
- ಒಂದು ಬಗೆಯ ಸೆಳೆತ ಹಾಗೂ ಬಡಿತಕ್ಕೆ ಒಳಗಾಗಬೇಕಾಗುವುದು.
- ದೇಹದ ಚರ್ಮಗಳೆಲ್ಲವೂ ತೆಳುವಾಗುತ್ತವೆ.
- ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತವೆ.



ಸೋಂಕುಗಳು ತಗಲುವುದು
ರಕ್ತ ಹೀನತೆಗೆ ಸರಿಯಾದ ಚಿಕಿತ್ಸೆ ಪಡೆಯದೆ ಹೋದರೆ ದೇಹದಲ್ಲಿ ವಿವಿಧ ಸೋಂಕುಗಳು ಕಾಣಿಸಿಕೊಳ್ಳಬಹುದು. ಕಬ್ಬಿಣದ ಕೊರತೆ ಇರುವಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುವುದು. ಜೊತೆಗೆ ಹೃದಯಕ್ಕೆ ಸಂಬಂಧಿಸಿದಂತೆ ಶ್ವಾಸಕೋಶದ ತೊಂದರೆ ಮತ್ತು ಉಸಿರಾಟದ ತೊಂದರೆ ಅಧಿಕವಾಗಿರುತ್ತವೆ.


ಕಬ್ಬಿಣಾಂಶ ಹೆಚ್ಚಿಸುವ ಆಹಾರ ಪದಾರ್ಥಗಳು
ದೇಹದಲ್ಲಿ ರಕ್ತಹೀನತೆ ಅಥವಾ ಕಬ್ಬಿಣಾಂಶದ ಸಮಸ್ಯೆಯನ್ನು ಹೊಂದಿರುವಾಗ ತ್ವರಿತವಾಗಿ ಕಬ್ಬಿಣಾಂಶ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಅದಕ್ಕೆ ಅದ್ಭುತವಾದ ಆಯ್ಕೆ ಎಂದರೆ ಕಾಳೆ ಸೊಪ್ಪು ಮತ್ತು ಹಸಿರು ಸೊಪ್ಪುಗಳು. ಹಸಿ ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ತಿಂದರೆ ಅಗತ್ಯವಾದ ಕಬ್ಬಿಣಾಂಶವು ದೇಹಕ್ಕೆ ಸಿಗುವುದು. 100 ಗ್ರಾಂ ಕರ್ಲಿ ಕೇಲ್ ಸೊಪ್ಪಿನಲ್ಲಿ ಸುಮಾರು 1.5 ಮಿ.ಗ್ರಾಂ ಕಬ್ಬಿಣಾಂಶ ಇರುತ್ತದೆ ಎಂದು ಹೇಳಲಾಗುವುದು.

ಕಬ್ಬಿಣಾಂಶ ಹೊಂದಿರುವ ಇತರ ಆಹಾರಗಳು
ಸಿರಿ ಧಾನ್ಯಗಳು, ಬೀನ್ಸ್, ಬೀಜಗಳು, ಒಣಗಿದ ಹಣ್ಣುಗಳು ಉತ್ತಮ ಕಬ್ಬಿಣಾಂಶಗಳನ್ನು ಒದಗಿಸುತ್ತವೆ. ಇದರ ಜೊತೆಗೆ ಮಾಂಸ ಮತ್ತು ಯಕೃತ್ತಿನ ಭಾಗವು ಹೆಚ್ಚಿನ ಕಬ್ಬಿಣಾಂಶ ನೀಡುತ್ತವೆ. ಗರ್ಭಿಣಿಯರು ಯಕೃತ್ ಮಾಂಸವನ್ನು ಸೇವಿಸಬಾರದು. ಅದು ಆರೋಗ್ಯದ ಮೇಲೆ ಗಂಭೀರವಾದ ಪ್ರಭಾವವನ್ನು ಉಂಟುಮಾಡುತ್ತದೆ.


ಕಬ್ಬಿಣಾಂಶದ ಕೊರತೆ ಇರುವಾಗ ಸೇವಿಸಬಾರದ ಆಹಾರ ಪದಾರ್ಥಗಳು
ಸಮಸ್ಯೆ ಇರುವ ವ್ಯಕ್ತಿಗಳು ಚಹಾ, ಕಾಫಿ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಇವುಗಳಲ್ಲಿ ಫೈಟಿಕ್ ಅಮ್ಲವು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಫೈಟಿಕ್ ಆಮ್ಲ ಇರುವ ಆಹಾರ ಪದಾರ್ಥಗಳು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತವೆ. ಆಗ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶದ ಪೂರೈಕೆಗೆ ಅಡ್ಡಿ ಉಂಟಾಗುವುದು. ಹಾಗಾಗಿ ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಕೊರತೆ ಇರುವವರು ಫೈಟಿಕ್ ಆಮ್ಲದ ಆಹಾರವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುವುದು.


ದೊಡ್ಡಪತ್ರೆ

ಸಂಸ್ಕೃತದಲ್ಲಿ ‘ಕರ್ಪೂರವಲ್ಲಿ’ಹಿಮಸಾಗರ’ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು”ಕೊಲಿಯಸ್ ಆಂಬೋಯ್ನಿಕಸ್”.ಆಡುಭಾಷೆಯಲ್ಲಿ ಸಾಂಭಾರುಬಳ್ಳಿ,ಸಾವಿರ ಸಂಭಾರ ಎಂದು ಕರೆಯಲ್ಪಡುವ ಇದು ಔಷಧೀಯ ಸಸ್ಯ.

+ ಇದರ ಎಲೆಯ ಚಟ್ನಿಯನ್ನು ಪ್ರತಿದಿನ ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುತ್ತದೆ.

+ ಮೈಮೇಲೆ ಪಿತ್ತದ ಗಂಧೆ ಕಾಣಿಸಿಕೊಂಡಾಗ ಇದರ ಎಲೆಯನ್ನು ಅರೆದು ಲೇಪಿಸಬೇಕು.ಇದರ ಚಟ್ನಿಯನ್ನು ದಿನ ಸೇವಿಸಬೇಕು.

+ ಇದರ ಎಲೆ ಅರೆದು ಪ್ರತಿದಿನ 12 ಗ್ರಾಂನಷ್ಟು ಸೇವಿಸುತ್ತಾ ಬಂದರೆ ಅರುಚಿ,ಅಜೀರ್ಣ,ಉದರಶೂಲೆ,ಬೇಧಿ ಕಾಲರಾ ಗುಣವಾಗುತ್ತದೆ.

+ ಈ ಎಲೆಯ ರಸದ ಜೊತೆ ಹಿಪ್ಪಲಿ ಬೆರೆಸಿ ಸೇವಿಸಿದರೆ ಮಕ್ಕಳ ಶೀತ ಕೆಮ್ಮು,ಕೆಮ್ಮಿನಿಂದ ಕೂಡಿದ ಜ್ವರ ವಾಸಿಯಾಗುತ್ತದೆ.

+ ಇದನ್ನು ಆಹಾರವಾಗಿ ಸೇವಿಸುವುದರಿಂದ ಪಿತ್ತಕೋಶದ ತೊಂದರೆಗಳು ಶಮನವಾಗುತ್ತವೆ.

+ ಜೇನು,ಚೇಳು ಕಚ್ಚಿದ ಜಾಗಕ್ಕೆ ಇದರ ಎಲೆಯನ್ನು ಅರೆದು ಲೇಪಿಸುತ್ತಾರೆ.

+ ಮೈಮೇಲೆ ಪಿತ್ತದ ಗಂಧೆ ಕಾಣಿಸಿದಾಗ ಎಲೆ ಅರೆದು ಮೈಗೆ ಲೇಪಿಸಿ


Monday, January 20, 2020

ಹಸಿ ಮೆಣಸಿನಕಾಯಿ

ಹಸಿ ಮೆಣಸಿನಕಾಯಿ


ಗೆಣಸು ಹೃದಯದ ಆರೋಗ್ಯಕ್ಕೆ ಹಾಗೂ ಹೊಟ್ಟೆಯ ಅಲ್ಸರ್ ಅಷ್ಟೇ , ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಔಷಧಿ ಗುಣ

ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಸಿಹಿ ಗೆಣಸು
ಸಿಹಿ ಗೆಣಸು ಅನ್ನೋದು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದ ತರಕಾರಿಗಳಲ್ಲಿ ಒಂದು ಅನ್ನಬಹುದು. ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಇದರಲ್ಲಿರುವಂತ ಹಲವು ಆರೋಗ್ಯಕಾರಿ ಗುಣಗಳು ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ಸಿಹಿ ಗೆಣಸು ದೇಹವನ್ನು ಗಟ್ಟಿಮುಟ್ಟಾಗಿ ಬಲಿಷ್ಠವಾಗಿ ಬೆಳೆಯುವಂತೆ ಮಾಡುತ್ತದೆ.

ಇದರಲ್ಲಿರುವಂತ ಆರೋಗ್ಯಕಾರಿ ಗುಣಗಳೇನು ಅನ್ನೋದನ್ನ ತಿಳಿಯುವುದಾದರೆ ವಿಟಮಿನ್ ಡಿ, ವಿಟಮಿನ್ ಬಿ 6, ಮಾಗ್ಯಶಿಯಂ, ಪೊಟ್ಯಾಶಿಯಂ ಹೀಗೆ ಅನೇಕ ಆರೋಗ್ಯಕಾರಿ ಗುಣಗಳನ್ನು ಸಿಹಿ ಗೆಣಸು ಹೊಂದಿದೆ. ಇದು ನಾಲಿಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ಲ ಇದರಲ್ಲಿ ಆರೋಗ್ಯದ ಪವಾಡವೇ ಇದೆ ಅನ್ನೋದನ್ನ ಹಿರಿಯರು ಹೇಳುತ್ತಿರುತ್ತಾರೆ.

ನೈಸರ್ಗಿಕವಾಗಿ ಸಿಗುವಂತ ಈ ಸಿಹಿ ಗೆಣಸು ಹೃದಯದ ಆರೋಗ್ಯಕ್ಕೆ ಹಾಗೂ ಹೊಟ್ಟೆಯ ಅಲ್ಸರ್ ಅಷ್ಟೇ ಅಲ್ದೆ ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಔಷದಿ ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಆಹಾರಗಳು ಜೀರ್ಣವಾಗಲು ಸಹಕಾರಿಯಾಗುತ್ತವೆ ಅಸಿಡಿಟಿ ಅಜೀರ್ಣತೆ ಮುಂತಾದ ಸಮಸ್ಯೆ ಕಾಡೋದಿಲ್ಲ. ಇದರಲ್ಲಿರುವ ವಿಶೇಷ ಗುಣ ಏನು ಅನ್ನೋದಾದರೆ ದೇಹಕ್ಕೆ ಯಾವುದೇ ವೈರಸ್ ಸೋಂಕು ತಗಲದಂತೆ ಸಂರಕ್ಷಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಇದ್ನನು ಸೇವನೆ ಮಾಡುವುದು ಅತಿ ಉತ್ತಮವಾಗಿದೆ.


Friday, January 17, 2020

ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಸಿಹಿ ಗೆಣಸು


ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಸಿಹಿ ಗೆಣಸು
ಸಿಹಿ ಗೆಣಸು ಅನ್ನೋದು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದ ತರಕಾರಿಗಳಲ್ಲಿ ಒಂದು ಅನ್ನಬಹುದು. ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಇದರಲ್ಲಿರುವಂತ ಹಲವು ಆರೋಗ್ಯಕಾರಿ ಗುಣಗಳು ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ಸಿಹಿ ಗೆಣಸು ದೇಹವನ್ನು ಗಟ್ಟಿಮುಟ್ಟಾಗಿ ಬಲಿಷ್ಠವಾಗಿ ಬೆಳೆಯುವಂತೆ ಮಾಡುತ್ತದೆ.

ಇದರಲ್ಲಿರುವಂತ ಆರೋಗ್ಯಕಾರಿ ಗುಣಗಳೇನು ಅನ್ನೋದನ್ನ ತಿಳಿಯುವುದಾದರೆ ವಿಟಮಿನ್ ಡಿ, ವಿಟಮಿನ್ ಬಿ 6, ಮಾಗ್ಯಶಿಯಂ, ಪೊಟ್ಯಾಶಿಯಂ ಹೀಗೆ ಅನೇಕ ಆರೋಗ್ಯಕಾರಿ ಗುಣಗಳನ್ನು ಸಿಹಿ ಗೆಣಸು ಹೊಂದಿದೆ. ಇದು ನಾಲಿಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ಲ ಇದರಲ್ಲಿ ಆರೋಗ್ಯದ ಪವಾಡವೇ ಇದೆ ಅನ್ನೋದನ್ನ ಹಿರಿಯರು ಹೇಳುತ್ತಿರುತ್ತಾರೆ.

ನೈಸರ್ಗಿಕವಾಗಿ ಸಿಗುವಂತ ಈ ಸಿಹಿ ಗೆಣಸು ಹೃದಯದ ಆರೋಗ್ಯಕ್ಕೆ ಹಾಗೂ ಹೊಟ್ಟೆಯ ಅಲ್ಸರ್ ಅಷ್ಟೇ ಅಲ್ದೆ ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಔಷಧಿ
ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಆಹಾರಗಳು ಜೀರ್ಣವಾಗಲು ಸಹಕಾರಿಯಾಗುತ್ತವೆ ಅಸಿಡಿಟಿ ಅಜೀರ್ಣತೆ ಮುಂತಾದ ಸಮಸ್ಯೆ ಕಾಡೋದಿಲ್ಲ. ಇದರಲ್ಲಿರುವ ವಿಶೇಷ ಗುಣ ಏನು ಅನ್ನೋದಾದರೆ ದೇಹಕ್ಕೆ ಯಾವುದೇ ವೈರಸ್ ಸೋಂಕು ತಗಲದಂತೆ ಸಂರಕ್ಷಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಇದ್ನನು ಸೇವನೆ ಮಾಡುವುದು ಅತಿ ಉತ್ತಮವಾಗಿದೆ.


ವಿಭಿನ್ನ ಜ್ವರಗಳಿಗೆ ಮನೆ ಮದ್ದು

**

ಬೆಚ್ಚನೆಯ ಶುಂಠಿ, ಕಷಾಯದಲ್ಲಿ ಜೇನು ತುಪ್ಪ ಬೆರೆಸಿ ಸೇವಿಸಿದರೆ ಹಳೆಯ ಜ್ವರ ನಿವಾರಣೆ
ಶುದ್ದ ಜೇನು ತುಪ್ಪದಲ್ಲಿ ಕರಿಮೆಣಸು ಮತ್ತು ಏಲಕ್ಕಿ ಚೂರ್ಣವನ್ನು ಸೇರಿಸಿ ಸೇವಿಸುವುದರಿಂದ ಹಳೆಯ ಜ್ವರ ವಾಸಿಯಾಗುತ್ತದೆ.

ಹಳೆಯ ಜ್ವರದಲ್ಲಿ ಅರ್ಧ ಚಮಚ ಹುರಿದ ಜೀರಿಗೆಯ ಚೂರ್ಣದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಬೇಕು.

ರೋಗಿಯ ತಲೆಯ ಮೇಲೆ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಹಾಕಿ ದೇಹಕ್ಕೆ ಜೇನುತುಪ್ಪ ಲೇಪನ ಮಾಡುವುದರಿಂದ ಉಷ್ಣಜ್ವರ ನಿಯಂತ್ರಣಕ್ಕೆ ಬರುತ್ತದೆ.

ಬದನೆಕಾಯಿಯನ್ನು ಬೆಂಕಿಯಲ್ಲಿ ಸುಟ್ಟು ಅದರ ನಾಲ್ಕು ಚಮಚ ರಸದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಿದರೆ ಉಷ್ಣಜ್ವರ ದೂರವಾಗುವುದು.

ತುಳಸಿ ಮತ್ತು ಪುದೀನಾ ಎಲೆಗಳ ಕಷಾಯ ಸೇವಿಸುವುದರಿಂದ ನಿತ್ಯ ಬರುವ ಜ್ವರ ನಿಲ್ಲುತ್ತದೆ.

12 ಗ್ರಾಂ ನಷ್ಟು ತುಳಸಿಯ ರಸವನ್ನು ನಿತ್ಯ ಸೇವಿಸುವುದರಿಂದ ನಿರಂತರವಾಗಿರುವ ಜ್ವರಾದಿಗಳು ನಿವಾರಣೆಯಾಗುತ್ತವೆ.

3 ಗ್ರಾಂ ತುಳಸಿ ರಸ, 3 ಗ್ರಾಂ ಕರಿಮೆಣಸು, 6 ಗ್ರಾಂ ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಿದರೆ ಜೀರ್ಣ ಜ್ವರ ಕಡಿಮೆಯಾಗುತ್ತದೆ.
ತುಳಸಿ, ಕರಿಮೆಣಸು, ಶುಂಠಿ, ಬೆಲ್ಲ ಇವುಗಳನ್ನು ಸೇರಿಸಿ ಕಷಾಯ ಸಿದ್ದ ಪಡಿಸಿ ಅದರಲ್ಲಿ ನಿಂಬೆ ರಸ ಸೇರಿಸಿ ಸೇವಿಸಿದರೆ ಸಾಮಾನ್ಯ ಜ್ವರ ನಿವಾರಣೆ
ರೋಗಿಗೆ ಗಾಬರಿಯ ಅನುಭವವಾಗುತ್ತಿದ್ದರೆ ತುಳಸಿಯ ಎಲೆಯ ರಸದಲ್ಲಿ ಸಕ್ಕರೆ ಸೇರಿಸಿ ಪಾನಕ ಮಾಡಿ ಸೇವಿಸಲು ಸೂಚಿಸಬೇಕು. ಗಾಬರಿಯೊಡನೆ ಹಳೆಯ ಜ್ವರ ಕೂಡ ದೂರವಾಗುತ್ತದೆ.


Tuesday, January 14, 2020

ಕೊಲೆಸ್ಟ್ರಾಲ್ ನಿಯಂತ್ರಣ:


ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ. ಸೀಬೆ ಹಣ್ಣನ್ನು ನಿಮ್ಮ ಡಯಟ್ ನಲ್ಲಿರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಿದೆ.

ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೂ ಅಪಾಯ ತಪ್ಪಿದ್ದಲ್ಲ

ಕ್ಯಾಲ್ಸಿಯಂ ಅನ್ನುವ ಖನಿಜಾಂಶ ದೇಹಕ್ಕೆ ಅತ್ಯವಶ್ಯಕ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಮೂಳೆಗಳು ಬಲಹೀನವಾಗುತ್ತದೆ ಎಂದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದಿರುತ್ತದೆ. ಆದರೆ ಕ್ಯಾಲ್ಸಿಯಂ ಹೆಚ್ಚಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ವಿಷಯ ಗೊತ್ತೇ?

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ 9-11mg/dlರಷ್ಟು ಇರಬೇಕು. ಇದಕ್ಕಿಂತ ಕಡಿಮೆಯಾದರೂ, ಹೆಚ್ಚಾದರೂ ಅನಾರೋಗ್ಯ ಉಂಟಾಗುವುದು. ದೇಹದಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾದರೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಕ್ಯಾಲ್ಸಿಯಂಮಿಯಾ(hypercalcemia) ಎಂದು ಕರೆಯುತ್ತಾರೆ.
ಹೈಪರ್ ಕ್ಯಾಲ್ಸಿಯಂಮಿಯಾದ ಮೊದಲನೇ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದಂತೆ ಹೈಪರ್ ಕ್ಯಾಲ್ಸಿಯಂಮಿಯಾದ ಲಕ್ಷಣಗಳು ಈ ಕೆಳಗಿನಂತೆ ಇರುತ್ತವೆ:

ವಾಂತಿ
ತೇಗು ಬಂದಂತೆ ಅನಿಸುವುದು, ಇದರ ಜೊತೆಗೆ ವಾಂತಿ, ತಲೆ ಸುತ್ತು ಕೂಡ ಕಂಡು ಬರುತ್ತದೆ.

ಹೃದಯದ ಬಡಿತದಲ್ಲಿ ವ್ಯತ್ಯಾಸ
ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದರೆ ಹೃದಯದ ಬಡಿತ ಹೆಚ್ಚಾಗುವುದು. ಇದು ECG(electrocardiogram)ಯಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ.

Polyuria( ಆಗಾಗ ಮೂತ್ರ ವಿಸರ್ಜನೆಗೆ)
ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು ಕೂಡ ಕ್ಯಾಲ್ಸಿಯಂ ಅಧಿಕವಾದರೆ ಕಂಡು ಬರುವ ಸಮಸ್ಯೆಯಾಗಿದೆ.

ಮಲಬದ್ಧತೆ
ಆಗಾಗ ಮೂತ್ರವಿಸರ್ಜನೆಗೆ ಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಮಲಬದ್ಧತೆ ಉಂಟಾಗುವುದು.

ಕಿಡ್ನಿಯಲ್ಲಿ ಕಲ್ಲು
ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೆ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು.

ತುಂಬಾ ಬಾಯಾರಿಕೆ
ಆಗಾಗ ಬಾಯಾರಿಕೆ ಉಂಟಾಗುವುದು, ಒಣ ತ್ವಚೆ, ಒಡೆದ ತುಟಿಗಳು ಕೂಡ ಹೈಪರ್ ಕ್ಯಾಲ್ಸಿಯಂಮಿಯಾದ ಲಕ್ಷಣಗಳಾಗಿವೆ.

ಅಸಿಡಿಟಿ
ಕ್ಯಾಲ್ಸಿಯಂ ಹೆಚ್ಚಾದರೆ ಅಸಿಡಿಟಿ ಉಂಟಾಗಿ ಅಲ್ಸರ್ ಗೆ ಕಾರಣವಾಗುತ್ತದೆ.

ಮೂಳೆ ಸಂಬಂಧಿ ಕಾಯಿಲೆಗಳು
ಕ್ಯಾಲ್ಸಿಯಂ ಜಾಸ್ತಿಯಾದರೂ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು. ಮೂಳೆಗಳಲ್ಲಿ ನೋವು ಈ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ.


Monday, January 13, 2020

ಅಶ್ವಗಂಧ ಎಂಬುದು ಒಂದು ಔಷಧಿಗಿಡ



ಅಶ್ವಗಂಧ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ 'ಹಿರೇಮದ್ದು' ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ.

ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ.

ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಇಂಗ್ಲೀಷ್ ನಲ್ಲಿ ಇದಕ್ಕೆ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್, ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ವಾಯವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು.

ಸೊಲನೇಸೀ ಕುಟುಂಬಕ್ಕೆ ಸೇರಿದ, ಔಷಧೀಯ ಮಹತ್ತ್ವವುಳ್ಳ ಸಸ್ಯ (ಪಿಂಟರ್ ಚೆರ್ರಿ). ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದಕ್ಕಿದೆ. ಇದರ ವೈಜ್ಞಾನಿಕ ಹೆಸರು ವಿತಾಸಿಯ ಸಾಮ್ನಿಫೆರ. ಸು. 1 ಮೀ ಎತ್ತರಕ್ಕೆ ಬೆಳೆಯುವ ಮೂಲಿಕೆ. ಆಫ್ರಿಕ, ಮೆಡಿಟರೇನಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.

ವರ್ಣನೆ
ಇದು ಒಂದರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುವ ಸುಂದರ ಪೊದೆ. ಇದರ ಎಲೆಗಳು ಆಡುಸೋಗೆಯ ಎಲೆಗಳನ್ನು ಹೋಲುವವು. ಆದರೆ ಅದಕ್ಕಿಂತ ಚಿಕ್ಕವು ಮತ್ತು ಅಷ್ಟು ಉದ್ದವಿರುವುದಿಲ್ಲ. ಎಲೆಗಳನ್ನು ಕೈಗಳಲ್ಲಿ ಉಜ್ಜಿದರೆ ಕುದುರೆಯ ಮೂತ್ರದ ವಾಸನೆ ಬರುವುದು.

ಆದುದರಿಂದ ಈ ಮೂಲಿಕೆಗೆ ಅಶ್ವಗಂಧ ಎನ್ನುವರು. ರುಚಿಯಲ್ಲಿ ಕಹಿ. ಎಲೆಗಳು ಬೂದು ಬಣ್ಣದ ರೋಮಗಳಿಂದ ಕೂಡಿರುವವು. ಹೂಗಳು ಹಸಿರು, ಹಳದಿ ಬಣ್ಣದ ಗೊಂಚಲುಗಳು, ಹಣ್ಣು ಕೆಂಪಾಗಿರುವುದು ಮತ್ತು ಹೊದಿಕೆಯಿಂದ ಕೂಡಿರುವುದು. ಈ ಹೊದಿಕೆಯೊಳಗಡೆಯಿಂದ ಇದರ ಹಣ್ಣು ನೋಡಲು ಮನ ಮೋಹಕವಾಗಿರುವುದು. ಬೇರುಗಳು ಬಿಳಿ ಮತ್ತು ನಸುಹಳದಿ ಬಣ್ಣದಿಂದ ಕೂಡಿರುವುದು

ಸರಳ ಚಿಕಿತ್ಸೆಗಳು

ಎಲೆ ಹಣ್ಣು ಮತ್ತು ಬೇರು ಚಿಕಿತ್ಸೆಗಳಲ್ಲಿ ಉಪಯೋಗಿಸುವರು. ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ಔಷಧಿ. ಬೇರಿನಲ್ಲಿ ಸೋಮ್ನಿಫೆರಸ್ ಅನ್ನುವ ಕ್ಷಾರವಿರುವುದು. ಈ ಕ್ಷಾರವು ನಿದ್ದೆ ಬರಿಸುವ ಸಾಮಥ್ರ್ಯ ಹೊಂದಿದೆ. ಸರ್ವ ರೋಗಕ್ಕೆ ಮದ್ದು ಹಿರೇಮದ್ದು ಎಂದು ನಾಣ್ನುಡಿ. ಸತ್ಯವೂ ಹೌದು.

ಇದು ರಕ್ತ ಶುದ್ಧಿ ಮಾಡಿ, ರಕ್ತ ವೃದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಟಿಯನ್ನು ಕೊಡುವುದು. ನಿಶ್ಶಕ್ತಿಯನ್ನು ನೀಗುವುದು ಹಾಗೂ ಗೆಲ್ಲುವ ಶಕ್ತಿಯಿದೆ. ಈ ವನೌಷಧಿ ಸೇವನೆಯಿಂದ ಸಂವೋಹಕಾರಿ ಚಿತ್ತ ಚಂಚಲತೆ, ಗಾಬರಿ ದೂರವಾಗುವುವು. ಮಕ್ಕಳಿಗೆ ಪುಷ್ಟಿ ನೀಡಿವುದು, ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ, ಸ್ಫೂರ್ತಿ ಮತ್ತು ಯೌವನವನ್ನು ಕೊಡುವುದು.

ಪುಷ್ಟಿ ಮತ್ತು ಶಕ್ತಿಗಾಗಿ (ಮಕ್ಕಳ ಮತ್ತು ವಯಸ್ಸಿನವರ)
100 ಗ್ರಾಂ ಅಶ್ವಗಂಧ ಬೇರನ್ನು ತಂದು ಹಾಲಿನಲ್ಲಿ ಬೇಯಿಸಿ ಶುದ್ಧ ಮಾಡಿ, ಒಣಗಿಸಿ, ಚೂರ್ಣಿಸಿ, ಗಾಜಿನ ಭರಣಿಯಲ್ಲಿಡುವುದು. ಸಮ ಪ್ರಮಾಣ ಸಕ್ಕರೆ ಸೇರಿಸಿ ಹೊತ್ತಿಗೆ 5 ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಬೆರೆಸಿದ ಹಾಲನ್ನು ಪಾನ ಮಾಡುವುದು.

ನೋವು ಮತ್ತು ಬಾವುಗಳು
ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುವುದು. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು.

ಪ್ರಜ್ವಲ ದೃಷ್ಟಿಗೆ
ಅಶ್ವಗಂಧ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಅಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಬೇಕು. ದೃಷ್ಟಿದೋಷಗಳು ನಿವಾರಣೆ ಆಗಿ ಕಣ್ಣು ದೃಷ್ಟಿ ಪ್ರಜ್ವಲವಾಗುವುದು. ಕಣ್ಣುಗಳನ್ನು ತ್ರಿಫಲ ಚೂರ್ಣದ ನೀರಿನಲ್ಲಿ ತೊಳೆಯುವುದು.

ವೃದ್ಧಾಪ್ಯದ ದೌರ್ಬಲ್ಯತೆಗೆ ಮತ್ತು ಶಕ್ತಿಗೆ
ಅಶ್ವಗಂಧದ ಬೇರುಗಳನ್ನು ಹಾಲಿನಲ್ಲಿ ಶುದ್ಧ ಮಾಡಿ ಒಣಗಿಸಿ ಚೂರ್ಣ ಮಾಡಿ, ಶೋಧಿಸಿಟ್ಟುಕೊಳ್ಳುವುದು, ಹೊತ್ತಿಗೆ ಎರಡೂವರೆ ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಸೇರಿಸಿದ ಹಾಲನ್ನು ಕುಡಿಯುವುದು.

ಸ್ತ್ರೀಯರ ಮುಟ್ಟಿನ ದೋಷಗಳು
ಶುದ್ಧಿ ಮಾಡಿದ ಅಶ್ವಗಂಧ ಚೂರ್ಣ, ಲೋದ್ರ ಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆ ಚೂರ್ಣ ಸಮ ಭಾಗ ಸೇರಿಸಿ, ಹೊತ್ತಿಗೆ 2.50 ಗ್ರಾಂ ಸೇವಿಸಿ, ಮೇಲೆ ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲು ಒಂದು ಲೋಟ ಸೇವಿಸಿವುದು.

ಈ ರೀತಿ ದಿನಕ್ಕೆ ಬೆಳಿಗ್ಗೆ ಸಾಯಂಕಾಲ ಎರಡು ಬಾರಿ ಸೇವಿಸುವುದು. ಈ ಔಷಧಿಯನ್ನು ಸೇವಿಸುವ ಅವಧಿಯನ್ನು ನಿರ್ಮಲಚಿತ್ತ, ಶಾಂತಸ್ವಭಾವ ಮತ್ತು ಶುಭಯೋಚನೆಗಳಿರಲಿ. ಇದರಿಂದ ಮಾನಸಿಕ ಚಂಚಲತೆ ಜೀವನದಲ್ಲಿ ಜಿಗುಪ್ಸೆ ಶಮನವಾಗುವುವು.

ಗರ್ಭಧಾರಣೆ
ಕೆಲವು ಕಾರಣಗಳಿಂದ ಸ್ತ್ರೀಯರಿಗೆ ಸಂತಾನವಿರುವುದಿಲ್ಲ. ದೋಷಗಳು ಸ್ತ್ರೀ ಪುರುಷರಿಬ್ಬರದು ಇರಬಹುದು. ಆದುದರಿಂದ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸ್ತ್ರೀ ಪುರುಷರಿಬ್ಬರೂ ಸೇವಿಸಬಹುದು. ಭಗವಂತನ ದಯೆಯಿಂದ ಮಕ್ಕಳಾಗುವವು. ಹಾಲು, ಅನ್ನ ಮತ್ತು ಮಧುರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು.

ಬಂಜೆತನ ದೂರವಾಗಲು
25 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕಾಯಿಸುವುದು. ಅಷ್ಟಾಂಷ ಕಷಾಯ ಮಾಡಿ ಇಟ್ಟುಕೊಳ್ಳುವುದು. ಮುಟ್ಟಿನ ಸ್ನಾನದ ನಂತರ 4 ಟೀ ಚಮಚ ಕಷಾಯವನ್ನು ಹಸುವಿನ ಹಾಲಿಗೆ ಸಕ್ಕರೆ, ತುಪ್ಪವನ್ನು ಸೇರಿಸಿ ಸೇವಿಸುವುದು. ಹೀಗೆ ಮೂರು ಮುಟ್ಟಿನಲ್ಲಿ ಕ್ರಮವಾಗಿ ಮಾಡುವುದು.

ಹಳೆಯ ಅಸಾಧ್ಯ ಜ್ವರದಲ್ಲಿ ಸಂಪಾದಿಸಿ
30 ಗ್ರಾಂ ಅಮೃತಬಳ್ಳಿಯ ಸತ್ವಕ್ಕೆ 40 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸೇರಿಸಿಟ್ಟುಕೊಳ್ಳುವುದು. ಒಂದು ವೇಳೆಗೆ ಎರಡೂವರೆ ಗ್ರಾಂನಷ್ಟು ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿವುದು.

ವಾತಕ್ಕೆ
ಅಶ್ವಗಂಧದ ಬೇರು ಮತ್ತು ಒಣಶುಂಠಿಯ ನಯವಾದ ಚೂರ್ಣ ಮತ್ತು ಕಲ್ಲಸಕ್ಕರೆ ಸೇರಿಸಿ ಬೆಳಿಗ್ಗೆ, ಸಂಜೆ ಸೇವಿಸುವುದು.

ಗಂಡಸರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ
ಕೆಲವು ವೇಳೆ ಗಂಡಸರ ವೀರ್ಯದಲ್ಲಿ ವೀರ್ಯಾಣುಗಳು ಇರಲೇಬೇಕಾದ ಸಂಖ್ಯೆಗಿಂತ ಕಡಿಮೆಯಿರುವುವು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಾಗುವುದಿಲ್ಲ. ಅಶ್ವಗಂಧ, ವಿದಾರಿಕಾಂಡ, ನೆಗ್ಗಿಲು ಮತ್ತು ಕಾಮೆ ಬೀಜಗಳಿಗೆ ಚೂರ್ಣವನ್ನು ಸೇರಿಸಿ, ತಜ್ಞರ ಮೇಲ್ವಿಚಾರಣೆಯಲ್ಲಿ ಜೇನುತುಪ್ಪ ಸೇರಿಸಿ ಸೇವಿಸಬೇಕು. ಹೀಗೆ ಒಂದೆರಡು ತಿಂಗಳು ಮಾಡುವುದು ಹಾಗೂ ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿ ಫಲಿತಾಂಶವನ್ನು ಗಮನಿಸುವುದು. ನೈಸರ್ಗಿಕ ರೀತಿಯಲ್ಲಿ ದೋಷ ಪರಿಹಾರವಾಗಿ ಮಕ್ಕಳಾಗುವುವು.

ಬೆನ್ನು ನೋವಿನಲ್ಲಿ
10 ಗ್ರಾಂ ಶುದ್ಧಿ ಮಾಡಿದ ಅಶ್ವಗಂಧದ ನಯವಾದ ಪುಡಿ ಮತ್ತು 10ಗ್ರಾಂ ಕೆಂಪು ಕಲ್ಲುಸಕ್ಕರೆ ಪುಡಿಯನ್ನು ಒಂದು ಬಟ್ಟಲು ಬಿಸಿ ಹಾಲಿನಲ್ಲಿ ಸೇರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಅಶ್ವಗಂಧದ ಎಲೆಗಳಿಗೆ ಎಳ್ಳೆಣ್ಣೆ ಸವರಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು. ಪ್ರತಿ ದಿವಸ ಎರಡು, ಮೂರು ಸಾರಿ ಈ ರೀತಿ ಮಾಡುವುದು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು


Sunday, January 12, 2020

ಸೀತಾಫಲ ಯಾಕೆ ತಿನ್ನಬೇಕು ?

ಅಪಾರ ವಿಟಮಿನ್-ಸಿ ಇರುವ ಹಣ್ಣು ಸೀತಾಫಲ. ಎಲ್ಲಾ ಕಾಲದಲ್ಲೂ ಈ ಹಣ್ಣು ಸಿಗುವುದಿಲ್ಲ. ದೊರಕುವಾಗ ದಿನಕ್ಕೆ ಒಂದು ಹಣ್ಣು ತಿನ್ನುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನಲ್ಲಿ ಕ್ಯಾಲೋರಿ ಹೆಚ್ಚು. ಇದರ ಇನ್ನಿತರ ಉಪಯೋಗಗಳು ಇಲ್ಲಿವೆ.


* ಹೃದಯ, ಎಲುಬು, ಚರ್ಮ ರಕ್ಷಣೆಗೆ ಸೀತಾಫಲ ಒಳ್ಳೆಯದು. ಇದರಲ್ಲಿರುವ ಪೊಟ್ಯಾಶಿಯಂ ಹೃದಯಬೇನೆ, ಪಾರ್ಶ್ವವಾಯು ಬರದಂತೆ ನೋಡಿಕೊಳ್ಳುತ್ತದೆ.


* ಕ್ರಮವಾಗಿ ಈ ಹಣ್ಣು ಸೇವಿಸುವವರಲ್ಲಿ ಕೀಲುನೋವು, ಆರ್ಥ್ರೈಟಿಸ್ ಬರುವ ಸಾಧ್ಯತೆ ಕಮ್ಮಿ. ಇದು ನೋವು ನಿವಾರಕ ಮತ್ತು ಹೊಟ್ಟೆಯಲ್ಲಿನ ಅಲ್ಸರ್ ಅನ್ನು ಗುಣಪಡಿಸುತ್ತದೆ.


* ಇದರಲ್ಲಿನ ನಾರು ಸತ್ವ ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಕೊಲೆಸ್ಟ್ರಾಲ್ ತಗ್ಗಿಸಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.


* ಇದರಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಇದು ದೃಷ್ಟಿ ಸ್ಪಷ್ಟತೆಗೆ ಸಹಾಯಕವಾಗಿದೆ.


* ಗರ್ಭಿಣಿಯರಿಗೆ ಇದೊಂದು ಉತ್ತಮ ಆಹಾರ. ವಾಂತಿ, ವಿಕಾರ, ರಕ್ತಹೀನತೆ ಇತ್ಯಾದಿಯನ್ನು ಹೋಗಲಾಡಿಸುತ್ತದೆ. ಮಲಬದ್ಧತೆ ಸಮಸ್ಯೆಗೂ ಪರಿಹಾರ ನೀಡುತ್ತದೆ.


* ಇದರಲ್ಲಿನ ಫಿನಾಲಿಕ್ ಪದಾರ್ಥ ಒಳ್ಳೆಯ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಸುಖ ನಿದ್ರೆಗೆ ಜಾರುವ ವಿಧಾನ ಹೇಗೆ ?


♦ ಸುಖ ನಿದ್ರೆಗೆ ಸಮಯ ಮತ್ತು ಜಾಗದ ಶಿಸ್ತಿರಬೇಕು.
♦ ಮಲಗುವ ವೇಳೆ ಚಿಂತೆಯನ್ನು ಸಂಪೂರ್ಣವಾಗಿ ಬಿಡಬೇಕು.
♦ ಹಾಸಿಗೆಯನ್ನು ಮಲಗಲಷ್ಟೆ ಬಳಸಬೇಕು.
♦ ಹಗಲು ನಿದ್ರೆ ಮಾಡುವ ಅನಿಷ್ಟತೆ ರೂಡಿಯಲ್ಲಿದ್ದರೆ ಬಿಡಬೇಕು.
♦ ಕಾಫಿ,ಟೀ ಯನ್ನು ತ್ಯಜಿಸಬೇಕು.ಏಕೆಂದರೆ ಇವುಗಳಿಂದ ಮೆದುಳು ಉತ್ತೇಜನಗೊಳ್ಳುತ್ತದೆ.ಹಾಗದಲ್ಲಿ ನಿದ್ರೆ ಬಾರದು .
♦ ಇನ್ನು ಸಂಗಾತಿಯೊಂದಿಗೆ ಮಲಗುವವರು ಸಂಗಾತಿ ಗೊರಕೆಯಿಂದ ದೂರ ಇರಬೇಕು ಅಥವಾ ಗೊರಕೆ ನಿಗ್ರಹಿಲೆತ್ನಿಸಬೇಕು,ಪಕ್ಕಕ್ಕೆ ಹೊರಳಿ ಮಲಗಿದ್ದಲ್ಲಿ ಗೊರಕೆ ಕಡಿಮೆಯಾಗಲಿದೆ.


Friday, January 10, 2020

ಜೇನು ನೊಣ ಕಚ್ಚಿದರೆ

ಜೇನು ನೊಣ ಕಚ್ಚಿದರೆ ಅಥವಾ ಯಾವುದಾದರೂ ಕೀಟ, ಚೇಳುಗಳು ಕಚ್ಚಿದ್ದಾಗ ಬಾಳೆ ಎಲೆಯ ರಸ ಹಾಕಿದರೆ ಬಹು ಬೇಗ ಗುಣವಾಗುತ್ತದೆ. ಒಂದು ಐಸ್ ಕ್ಯೂಬ್ ತೆಗೆದಕೊಂಡು ಅದನ್ನು ಬಾಳೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು

ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು

ಅಲ್ಲದೇ ಕೂದಲಿನ ಸಮಸ್ಯೆಗಳಾದ ತಲೆ ಹೊಟ್ಟಿಗೆ ಕುಡಿ ಬಾಳೆ ಎಳೆಗಳ ಪೇಸ್ಟ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ,ನಿಮ್ಮ ಮುಖದ ಮೇಲಿನ ಹಾಗೂ ಚರ್ಮದ ಮೇಲಿನ ಕಲೆಗಳನ್ನು ಹೂಗಲಾಡಿಸಬಹುದು.ಬಾಳೆ ಎಲೆ ಮಾನವನ ಆರೋಗ್ಯಕ್ಕೆ ಬಹಳ ಅನುಕೂಲವಾಗಿದೆ.


ಧನ್ವಂತರಿ


Thursday, January 9, 2020

ಕಜ್ಜಿಗೆ ಮನೆ ಮದ್ದು



ಎಳನೀರು ಹಾಗೂ ಟೋಮಾಟೋ ರಸ ಎರಡನ್ನು ಸಮ ಪ್ರಮಾಣದಲ್ಲಿ ಸೇರಿಸಿ ತ್ವಚೆಗೆ ಲೇಪಿಸಿ ಸೌಮ್ಯವಾಗಿ ಮಾಲೀಶ್ ಮಾಡಬೇಕು.

ತೆಂಗಿನೆಣ್ಣಿಯಲ್ಲಿ ಸ್ವಲ್ಪ ಕಡಲೆ ಗಿಡದ ಬೇರನ್ನು ಅರೆದು ಸೇರಿಸಿ ಇದನ್ನು ದಿನದಲ್ಲಿ 4 ರಿಂದ 5 ಬಾರಿ ಕಜ್ಜಿಗಳ ಮೇಲೆ ಲೇಪಿಸಬೇಕು.

ಕಮಲದ ಬೇರನ್ನು ತೆಂಗಿನ ನೀರಿನಲ್ಲಿ ತೇಯ್ದು ಯಥಾ ಸ್ಥಾನದಲ್ಲಿ ಲೇಪಿಸಬೇಕು.

ಕೊಬ್ಬರಿ ಎಣ್ಣೆಗೆ ನಿಂಬೆಯ ರಸ ಸೇರಿಸಿ ಕಜ್ಜಿಗಳಿಗೆ ಲೇಪಿಸುವುದರಿಂದ ಕ್ರಮೇಣವಾಗಿ ಅವು ಒಣಗುತ್ತಾ ಹೋಗುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ತುಳಸಿ ಎಲೆಯ ರಸ ಹಾಗೂ ನಿಂಬೆಯ ರಸ ಎರಡನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕಜ್ಜಿಗಳ ಮೇಲೆ ಹಿತ ಕಾಣುವವರೆಗೆ ಲೇಪಿಸುತ್ತಿರಬೇಕು.

ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಬೇವಿನ ಎಲೆಗಳ ಭಸ್ಮವನ್ನು ಸೇರಿಸಿ ಯತಾಸ್ಥಾನದಲ್ಲಿ ಲೇಪಿಸಬೇಕು.

ಸಾಸಿವೆ ಎಣ್ಣೆಯಲ್ಲಿ ಹುರಿದ ಪಟಕದ ಚೂರ್ಣ ಸುಟ್ಟ ಹಸಿ ಶುಂಠಿಯ ಭಸ್ಮ 4 ರಿಂದ 5 ಹಸಿ ಸೀಮೆ ಎಣ್ಣೆ ಇವುಗಳನ್ನು ಸೇರಿಸಿ ಭಾದಿತ ಚರ್ಮದ ಮೇಲೆ ಲೇಪಿಸಬೇಕು.

ಸ್ವಲ್ಪ ಮಲ್ಲಿಗೆ ತೈಲದಲ್ಲಿ ನಿಂಬೆರಸ ಹಾಗೂ ಹಸಿ ಶುಂಠಿಯ ರಸ ಎರಡನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ ಕಜ್ಜಿಗಳ ಮೇಲೆ ಲೇಪಿಸಬೇಕು.

ಬೇವಿನ ಎಣ್ಣೆಯಲ್ಲಿ ಸ್ವಲ್ಪ ಹಸಿ ಶುಂಠಿಯ ರಸ ಸೇರಿಸಿ ಪದೆ ಪದೇ ಲೇಪಿಸುತ್ತಿರಬೇಕು.

ಶುದ್ದ ನೆಲ ಜೇನುತುಪ್ಪ ಕಜ್ಜಿಗಳ ಮೇಲೆ ಮುಲಾಮಿನಂತೆ ಲೇಪಿಸಬಹುದು.


ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...