Thursday, November 21, 2019

ಬೆಳಗ್ಗೆದ್ದ ತಕ್ಷಣ ಖಾಲಿ ಹೊಟ್ಟೆಗೆ ಸೇವಿಸಬೇಕಾದ ಅತ್ಯುತ್ತಮವಾದ ಆಹಾರಗಳು

ಬೆಳಗ್ಗಿನ ಉಪಾಹಾರಕ್ಕೆ ಬ್ರೇಕ್ ಫಾಸ್ಟ್ ಎಂದೇಕೆ ಕರೆಯುತ್ತಾರೆ ಗೊತ್ತೇ? ರಾತ್ರಿಯ ಹೊತ್ತಿನ ಅವಧಿಯಲ್ಲಿ ಹಲವಾರು ಅನೈಚ್ಛಿಕ ಕಾರ್ಯಗಳು ಜರುಗುತ್ತವೆ ಹಾಗೂ ಇದಕ್ಕಾಗಿ ಹೆಚ್ಚಿನ ಶಕ್ತಿಯನ್ನು ದೇಹ ಬಳಸಿಕೊಂಡಿರುತ್ತದೆ. ಹಾಗಾಗಿ ಬೆಳಿಗ್ಗೆದ್ದಾಗ ಹೆಚ್ಚೂ ಕಡಿಮೆ ನಮ್ಮ ಹೊಟ್ಟೆ ಖಾಲಿಯಾಗಿದ್ದು ಇಂದಿನ ಕೆಲಸಕ್ಕೆ ಬೇಕಾದ ಶಕ್ತಿಯನ್ನು ಪೂರೈಸಲು ಅಸಮರ್ಥವಾಗಿರುತ್ತದೆ. ಹಾಗಾಗಿ ಈ ಹೊತ್ತಿನಲ್ಲಿ ಸೇವಿಸುವ ಪ್ರಥಮ ಅಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದೇ ಕಾರಣಕ್ಕೆ ದಿನದ ಯಾವುದೇ ಹೊತ್ತಿನ ಆಹಾರವನ್ನು ಬಿಟ್ಟರೂ, ಉಪಾಹಾರವನ್ನು ಮಾತ್ರ ಬಿಡಲೇಬಾರದು!

ಅಷ್ಟೇ ಅಲ್ಲ, ತಡವಾಗಿಸಲೂಬಾರದು. ಮುಖ್ಯವಾಗಿ ನಮ್ಮ ಮೆದುಳಿಗೆ ಬೆಳಗ್ಗಿನ ಮೊದಲ ಆಹಾರದಿಂದ ಲಭಿಸುವ ಶಕ್ತಿಯ ಅಗತ್ಯವಿರುತ್ತದೆ. ಹಾಗಾಗಿ ಉಪಾಹಾರವಿಲ್ಲದೇ ಕೆಲಸಕ್ಕೆ ಹೊರಟಿರೋ, ತಲೆಸುತ್ತುವುದು, ತಲೆ ಗುಂಯ್ಗುಡುವುದು, ಸುಸ್ತು, ಮನೋಭಾವ ಚೆನ್ನಾಗಿಲ್ಲದಿರುವುದು ಮೊದಲಾದವು ಎದುರಾಗಬಹುದು. ಕೇವಲ ಮೆದುಳಿಗೆ ಮಾತ್ರವಲ್ಲ, ದೇಹದ ಹಲವಾರು ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಹಾ ಉಪಾಹಾರ ಅತ್ಯಗತ್ಯವಾಗಿ ಬೇಕು. ಹಾಗೆಂದ ಮಾತ್ರಕ್ಕೆ ಉಪಾಹಾರವನ್ನು ಹೆಚ್ಚಿನ ಪ್ರಮಾಣದಲ್ಲಿಯೂ ಸೇವಿಸಬಾರದು. ಮಿತವಾಗಿರಬೇಕು. ಇದೇ ಕಾರಣಕ್ಕೆ ನಮ್ಮ ಹಿರಿಯರು ಈ ಹೊತ್ತಿನ ಆಹಾರಕ್ಕೆ’ಉಪ’ಆಹಾರ ಎಂದೇ ಕರೆದಿದ್ದಾರೆ.

ಈ ಅಹಾರ ಎಷ್ಟು ಮುಖ್ಯವೆಂದರೆ ಅಗತ್ಯ ಕಾರ್ಯಗಳಿಗೆ ನೆರವಾಗುವ ಶಕ್ತಿ ತಕ್ಷಣವೇ ಪೂರೈಕೆಯಾಗುವಂತಿರಬೇಕು ಮತ್ತು ಆರೋಗ್ಯವನ್ನು ಬಾಧಿಸಲೂಬಾರದು. ಹಾಗಾಗಿ ಪ್ರಥಮ ಆಹಾರವಾಗಿ ಸೇವಿಸಲು ಕೆಲವು ಆಹಾರಗಳು ಮಾತ್ರವೇ ಅರ್ಹತೆ ಪಡೆದಿವೆ. ಮಾಹಿತಿಯ ಕೊರತೆಯಿಂದ ಉಪಾಹಾರಕ್ಕೆ ಸೂಕ್ತವಲ್ಲದ ಆಹಾರವನ್ನು ಸೇವಿಸಿದರೆ ಆರೋಗ್ಯ ಮತ್ತು ಮನೋಭಾವ ಎರಡರ ಮೇಲೂ ಪ್ರಭಾವ ಆಗುವುದು ಖಚಿತ. ಒಂದು ವೇಳೆ ನಿಮಗೆ ಈ ಬಗ್ಗೆ ಅರಿವಿಲ್ಲದೇ ಇದ್ದರೆ ಕೆಳಗೆ ವಿವರಿಸಿದ ಅಹಾರಗಳಲ್ಲೊಂದನ್ನು ಆರಿಸಿ ಉಪಾಹಾರದ ರೂಪದಲ್ಲಿ ಸೇವಿಸುವ ಮೂಲಕ ನಿಮ್ಮ ದಿನವನ್ನು ಚೇತೋಹಾರಿಯಾಗಿಸಬಹುದು. 

ನೆನೆಸಿಟ್ಟಿದ್ದ ಬಾದಾಮಿಗಳು

ಹಿಂದೆಲ್ಲಾ ನಮ್ಮ ಹಿರಿಯರು ಅಂಗಡಿಯಲ್ಲಿ ಚೌಕಾಶಿ ಮಾಡುವಾಗ ಅಂಗಡಿ ಶೆಟ್ಟರ ಹತ್ತಿರ ಅಗ್ಗದ ದಿನಸಿಗಳಿಗೂ ಬೆಲೆ ಹೆಚ್ಚು ಎಂದು ಉಲ್ಲೇಖಿಸುತ್ತಾ? ಏಕಿಷ್ಟು ಬೆಲೆ? ಇದೇನು ಬಾದಾಮಿಯೇ? ಎನ್ನುತ್ತಿದ್ದುದು ಇನ್ನೂ ನೆನಪಿದೆ. ಬಾದಾಮಿ ಈ ಜಗತ್ತಿನಲ್ಲಿ ಲಭ್ಯವಿರುವ ಅತ್ಯಂತ ಆರೋಗ್ಯಕರ ಒಣಫಲವಾಗಿದ್ದು ಸ್ವಾಭಾವಿಕವಾಗಿಯೇ ಕೊಂಚ ದುಬಾರಿಯೂ ಹೌದು. ಇದರಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಸೂಕ್ತ. ಮ್ಯಾಂಗನೀಸ್, ವಿಟಮಿನ್ ಇ, ಪ್ರೋಟೀನ್, ಕರಗುವ ನಾರು, ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನ ಆಮ್ಲ ಮೊದಲಾದವು ಇದರಲ್ಲಿ ಸಮೃದ್ದವಾಗಿವೆ.

ಬಾದಾಮಿಗಳು

ಆದರೆ ಸಿದ್ಧ ರೂಪದಲ್ಲಿ ಬಾದಾಮಿ ಒಣಫಲವಾಗಿಯೇ ದೊರಕುವುದರಿಂದ ಇದರಲ್ಲಿ ಇದರ ಪೋಷಕಾಂಶಗಳು ಸುಪ್ತಾವಸ್ಥೆಯಲ್ಲಿರುತ್ತವೆ. ಹಾಗಾಗಿ ಒಣದಾಗಿಯೇ ತಿಂದರೆ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ, ರಾತ್ರಿ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಪ್ರಥಮ ಆಹಾರವಾಗಿ ಸೇವಿಸುವುದು ಅತ್ಯುತ್ತಮ ವಿಧಾನವಾಗಿದೆ. ಅಲ್ಲದೇ ಇದರ ಸಿಪ್ಪೆಯಲ್ಲಿರುವ ಟ್ಯಾನಿನ್ ಈ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುವ ಕಾರಣ ನೆನೆಸಿಟ್ಟ ಬಾದಾಮಿಯಿಂದ ಈ ಸಿಪ್ಪೆಯನ್ನು ನಿವಾರಿಸಿ ತಿನ್ನುವುದೊಳಿತು.

ಜೇನು ಬೆರೆಸಿದ ಬೆಚ್ಚನೆಯ ನೀರು

ಜೇನು ಎಂದೆಂದಿಗೂ ಹಾಳಾಗದ ಆಹಾರ ಎಂದೇ ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿರುವ ಆಹಾರವಾಗಿದ್ದು ಹಲವಾರು ಪೋಷಕಾಂಶಗಳಿವೆ. ಮುಖ್ಯವಾಗಿ ಖನಿಜಗಳು, ಜೀವಸತ್ವಗಳು, ಫ್ಲೇವನಾಯ್ಡ್ಗಳು ಮತ್ತು ಕಿಣ್ವಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಕರುಳುಗಳನ್ನು ಕಲ್ಮಶರಹಿತವಾಗಿರಿಸಲು ನೆರವಾಗುತ್ತವೆ. ಹಾಗಾಗಿ ಜೊಂಚ ಜೇನು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಪ್ರಥಮ ಆಹಾರವಾಗಿ ಸೇವಿಸಿದರೆ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೇ ಇದರಲ್ಲಿರುವ ಸಕ್ಕರೆಯ ಅಂಶ ದಿನದ ಕೆಲಸಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಈ ಸಕ್ಕರೆಯ ಕಾರಣದಿಂದಾಗಿ ಜೇನು ಮಧುಮೇಹಿಗಳಿಗೆ ಸೂಕ್ತವಲ್ಲ. ಮಧುಮೇಹಿಗಳ ಹೊರತಾಗಿ ಉಳಿದ ಎಲ್ಲರಿಗೂ ಜೇನು ಜೀವದ್ರವವೇ ಹೌದು .

ಗೋಧಿಹುಲ್ಲಿನ ಪುಡಿ (Wheat grass powder) ಬೆರೆಸಿದ ನೀರು

ಇಲಿನಾಯ್ಸ್ ರಾಜ್ಯ ವಿಶ್ವವಿದ್ಯಾಲಯದ ಪ್ರಕಾರ, ನಿಮ್ಮ ಅಹಾರದಲ್ಲಿ ಗೋಧಿಹುಲ್ಲನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾನ್ಯ ಪ್ರಮಾಣದ ಸಸ್ಯಾಹಾರಿ ಆಹಾರದ ಮೂಲಕ ಪಡೆಯುವ ಪೋಷಕಾಂಶಗಳನ್ನು ಪಡೆಯಬಹುದು. ಪುಡಿಯ ರೂಪದಲ್ಲಿ ದೊರಕುವ ಈ ಆಹಾರವನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗುವ ಜೊತೆಗೇ ಮಲಬದ್ದತೆಯ ತೊಂದರೆಯೂ ಇಲ್ಲವಾಗುತ್ತದೆ. ವಿಶೇಷವಾಗಿ ಕರುಳಿನಲ್ಲಿ ತೊಂದರೆ ಇರುವವರಿಗೆ ಈ ಆಹಾರ ಅತಿ ಸೂಕ್ತವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವಕೋಶಗಳನ್ನು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸಿ ಆರೋಗ್ಯ ಕಾಪಾಡಿಕೊಳ್ಳಲೂ ನೆರವಾಗುತ್ತವೆ.

ನೆನೆಸಿಟ್ಟ ಒಣದ್ರಾಕ್ಷಿ

ಬಾದಾಮಿಯಂತೆಯೇ ಕೊಂಚ ಕಪ್ಪು ಒಣದ್ರಾಕ್ಷಿಗಳನ್ನು ರಾತ್ರೆ ನೆನೆಸಿಟ್ಟು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಬಹುದು. ಇದರಲ್ಲಿ ಹೆಚ್ಚಿನ ಸಾಂದ್ರತೆಯ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕಬ್ಬಿಣಗಳಿವೆ. ಇದರ ಜೊತೆಗೇ ಇದರಲ್ಲಿರುವ ಸಕ್ಕರೆಯ ಅಂಶ ದಿನದ ಅಗತ್ಯದ ಶಕ್ತಿಯನ್ನು ಒದಗಿಸುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ದ್ಷಾಕ್ಷಾರಸ ಕ್ಷಾರೀಯವಾಗಿರುವ ಕಾರಣ ಆಮ್ಲೀಯತೆಯಿಂದ ಎದುರಾದ ಹೊಟ್ಟೆಯ ತೊಂದರೆಗಳೂ ಇಲ್ಲವಾಗುತ್ತವೆ .

ಪಪ್ಪಾಯಿ

ಬೆಳಗ್ಗಿನ ನಿಸರ್ಗಕ್ರಿಯೆ ಸುಲಭವಾಗಿ ಸಾಧ್ಯವಾಗದವರಿಗೆ ಪಪ್ಪಾಯಿ ಹಣ್ಣು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರ ಚೆನ್ನಾಗಿ ಹಣ್ಣಾದ ತಿರುಳನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗುವುದು ಮಾತ್ರವಲ್ಲ, ಕಲ್ಮಶಗಳನ್ನು ದೇಹದಿಂದ ಸುಲಭವಾಗಿ ನಿವಾರಿಸಲೂ ಸಾಧ್ಯವಾಗುತ್ತದೆ. ವರ್ಷವಿಡೀ ಸುಲಭದರದಲ್ಲಿ ಸಿಗುವ ಪೊಪ್ಪಾಯಿಯ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವ ಜೊತೆಗೇ ಹೃದಯದ ತೊಂದರೆಗಳ ವಿರುದ್ದ ರಕ್ಷಣೆಯೂ ದೊರಕುತ್ತದೆ. ಗರ್ಭಧರಿಸುವ ಯತ್ನದಲ್ಲಿರುವ ಮಹಿಳೆಯರು ಮತ್ತು ಪ್ರಥಮ ಮೂರು ತಿಂಗಳ ಗರ್ಭವತಿಯರಿಗೆ ಪೊಪ್ಪಾಯಿ ಸೂಕ್ತವಲ್ಲದ ಕಾರಣ ಉಳಿದವರೆಲ್ಲರೂ ಪಪ್ಪಾಯಿಯನ್ನು ದಿನದ ಮೊದಲ ಆಹಾರವಾಗಿ ಸೇವಿಸಬಹುದು. ಪೊಪ್ಪಾಯಿಯ ಸೇವನೆಯ ಬಳಿಕ ಉಪಾಹಾರ ಸೇವಿಸುವ ನಡುವೆ ಸುಮಾರು ನಲವತ್ತೈದು ನಿಮಿಷಗಳಾದರೂ ಅಂತರವಿರಲಿ.

ಕಲ್ಲಂಗಡಿ ಹಣ್ಣು

ಬೇಸಿಗೆಯ ಸಮಯದಲ್ಲಿಯೇ ದೊರಕುವ ಈ ಹಣ್ಣು ಬೇಸಿಗೆಗಾಗಿಯೇ ನಿಸರ್ಗ ಒದಗಿಸಿದ ಅತ್ಯುತ್ತಮ ಫಲವಾಗಿದೆ. ಸೌತೇಕಾಯಿಯಂತೆಯೇ ಕಲ್ಲಂಗಡಿಯಲ್ಲಿ ಶೇಖಡಾ ತೊಂಭತ್ತರಷ್ಟು ನೀರಿನಂಶವಿದೆ. ಇದೇ ಕಾರಣಕ್ಕೆ ಇದರ ಹೆಸರಿನಲ್ಲಿಯೇ ’ವಾಟರ್’ ಎಂದು ಸೇರಿಸಿದ್ದಾರೆ. ಉಳಿದ ಭಾಗದಲ್ಲಿ ಬಹುತೇಕ ಎಲೆಕ್ಟ್ರೋಲೈಟುಗಳಿದ್ದು ಬಿಸಿಲಿನ ಬೇಗೆಯಿಂದ ದೇಹದಿಂದ ನಷ್ಟವಾದ ಪೋಷಕಾಂಶಗಳನ್ನು ಪಡೆಯಲು ನೆರವಾಗುತ್ತದೆ. ಅಲ್ಪ ಪ್ರಮಾಣದ ಸಕ್ಕರೆ ಮತ್ತು ಇತರ ಖನಿಜಗಳು ದೇಹಕ್ಕೆ ಅಗತ್ಯ ಪೋಷಣೆ ಒದಗಿಸುವ ಜೊತೆಗೇ ಇದರಲ್ಲಿರುವ ಅತಿ ಕಡಿಮೆ ಕ್ಯಾಲೋರಿಗಳು (ಒಂದು ಕಪ್ ನಲ್ಲಿರುವುದು ಕೇವಲ ನಲವತ್ತು ಕ್ಯಾಲೋರಿಗಳು) ತೂಕ ಇಳಿಸುವ ಪ್ರಯತ್ನದಲ್ಲಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ಲೈಕೋಪೀನ್ ಹೃದಯ ಮತ್ತು ಕಣ್ಣುಗಳಿಗೂ ಒಳ್ಳೆಯದು.

ಚಿಯಾ ಬೀಜಗಳು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಸಾಸಿವೆಗಾತ್ರದ ಬೆಳ್ಳಗಿನ ಕಾಳುಗಳಲ್ಲಿ ಸಮೃದ್ದ ಪ್ರಮಾಣದ ಪ್ರೋಟೀನ್, ಕರಗುವ ನಾರು, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟುಗಳು ಮತ್ತು ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ. ಬಾದಾಮಿಯಂತೆಯೇ ಇವುಗಳನ್ನೂ ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಬೇಕು. ವಾಸ್ತವದಲ್ಲಿ ಈ ಬೀಜಗಳು ಒಣಗಿದ್ದಾಗ ಸಂಕುಚಿತಗೊಂಡಿದ್ದು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಒಳಗಾದೊಡನೆ ತಮ್ಮ ಗಾತ್ರವನ್ನು ಹಲವು ಪಟ್ಟು ಹಿಗ್ಗಿಸಿಕೊಳ್ಳುವ ಕಾರಣ ಕೊಂಚ ಪ್ರಮಾಣದಲ್ಲಿ ಸೇವಿಸಿದರೂ ಸಾಕು, ಹೊಟ್ಟೆ ತುಂಬಿದಂತಾಗುತ್ತದೆ ಹಾಗೂ ಸುಮಾರು ಮಧ್ಯಾಹ್ನದ ವರೆಗೂ ಹಸಿವಾಗದೇ ಇರಲು ನೆರವಾಗುತ್ತದೆ. ತನ್ಮೂಲಕ ಅನಗತ್ಯ ಆಹಾರಸೇವನೆಗೆ ಕಡಿವಾಣ ಹಾಕಿ ತೂಕ ಇಳಿಕೆಗೆ ನೆರವಾಗುತ್ತದೆ. ಅಲ್ಲದೇ ನೆನೆಸಿಟ್ಟ ಕಾಳುಗಳಿಗೆ ಆವರಿಸಿಕೊಳ್ಳುವ ಜಿಲಾಟಿನ್ ಅಹಾರ ಕರುಳುಗಳಲ್ಲಿ ಸರಾಗವಾಗಿ ಮುಂದೆ ಚಲಿಸುವಂತೆ ಮಾಡುತ್ತದೆ.

ಓಟ್ಸ್, ಹುರುಳಿ ಮತ್ತು ಮೆಕ್ಕೆಜೋಳದ ಗಂಜಿ

ನಮ್ಮ ಕರಾವಳಿಯ ಹಲವು ಕುಟುಂಬಗಳು ಕುಚ್ಚಿಗೆ ಅಕ್ಕಿಯ ಗಂಜಿಯನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸಿ ಸುಮಾರು ಒಂಭತ್ತು ಹತ್ತು ಘಂಟೆಗೆ ಉಪಾಹಾರ ಸೇವಿಸುತ್ತಾರೆ. ಈ ಗಂಜಿಯನ್ನು ಸೇವಿಸುವುದರಿಂದಲೇ ಅವರ ಕಸುಬಿನ ಶ್ರಮದಾಯಕ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆಯೇ ಹೊರತು ಬೇರಾವ ತಿಂಡಿ ತಿಂದರೂ ಕೆಲಸ ಮಾಡಲಿಕ್ಕಾಗುವುದಿಲ್ಲ ಎಂಬ ಅಭಿಪ್ರಾಯವನ್ನು ತಿಳಿಸುತ್ತಾರೆ. ಇದೇ ಶಕ್ತಿಯನ್ನು ಅಕ್ಕಿಯ ಗಂಜಿಯ ಬದಲು ಓಟ್ಸ್ ಅಥವಾ ಇತರ ಕಾಳುಗಳಿಂದ ಮಾಡಿ ಸೇವಿಸಿದರೆ ಇನ್ನೂ ಹೆಚ್ಚಿನ ಪ್ರಯೋಜನವಿದೆ. ಓಟ್ಸ್ ನಲ್ಲಿರುವ ಪೋಷಕಾಂಶಗಳು ಪ್ರಬಲ ಜಠರರಸದ ಆಮ್ಲಗಳು ಖಾಲಿಯಾಗಿದ್ದ ಹೊಟ್ಟೆಯ ಒಳಪದರದ ಮೇಲೆ ಧಾಳಿ ಎಸಗದಂತೆ ಕಾಪಾಡುತ್ತದೆ. ಅಲ್ಲದೇ ಇದರಲ್ಲಿರುವ ಕರುಗುವ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ಕೆಟ್ಟ ಕೊಲೆಸ್ಟಾಲ್ ಮಟ್ಟವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಸಾಧ್ಯವಾದರೆ ಓಟ್ಸ್ ನೊಂದಿಗೆ ಹುರುಳಿ ಮತ್ತು ಮೆಕ್ಕೆಜೋಳವನ್ನೂ ಬೆರೆಸಿ ಗಂಜಿ ಮಾಡಿ ಸೇವಿಸಿದರೆ ಹೆಚ್ಚಿನ ಪ್ರಯೋಜನವಿದೆ.

ಮೊಟ್ಟೆ

ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ. ಇದು ನಮ್ಮ ಮೊಟ್ಟೆ ಉದ್ಯಮದ ಧ್ಯೇಯವಾಕ್ಯ. ಆದರೆ ಮೊಟ್ಟೆಯನ್ನು ದಿನದ ಯಾವ ಹೊತ್ತಿನಲ್ಲಿ ತಿನ್ನಬೇಕು ಎಂದು ಇದು ತಿಳಿಸುವುದಿಲ್ಲ. ಮೊಟ್ಟೆಯನ್ನು ದಿನದ ಯಾವುದೇ ಹೊತ್ತಿನ ಆಹಾರವಾಗಿ ಸೇವಿಸಬಹುದಾದರೂ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿದರೆ ಹೆಚ್ಚಿನ ಪ್ರಯೋಜನಗಳಿವೆ. ಇದರಲ್ಲಿ ಸಮೃದ್ದವಾಗಿರುವ ಪೋಷಕಾಂಶಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಧ್ಯಯನಗಳಲ್ಲಿ ಕಂಡುಕೊಂಡಂತೆ ಬೆಳಗ್ಗಿನ ಹೊತ್ತಿನ ಮೊಟ್ಟೆಯ ಸೇವನೆಯಿಂದ ದಿನದ ಒಟ್ಟಾರೆ ಕ್ಯಾಲೋರಿಗಳ ಸೇವನೆ ಕಡಿಮೆಯಾಗುತ್ತದೆ ಹಾಗೂ ಕೊಬ್ಬು ಸಹಾ ಇಲ್ಲವಾಗತೊಡಗುತ್ತದೆ .

ಬೆಳಗ್ಗಿನ ಪ್ರಥಮ ಅಹಾರವಾಗಿ ಸೇವಿಸಲು ಈ ಆಹಾರಗಳು ಅತ್ಯುತ್ತಮವಾಗಿವೆ. ಆದರೆ ಕೇವಲ ಅಹಾರ ಸೇವಿಸಿದರೆ ಸಾಲದು ಕೊಂಚ ಹೊತ್ತಿನ ಬೆಳಗ್ಗಿನ ನಡಿಗೆ, ಯೋಗಾಭ್ಯಾಸ, ಲಘು ವ್ಯಾಯಾಮಗಳು ಸಹಾ ಅಗತ್ಯ. ಬಳಿಕ ತಣ್ಣೀರಿನ ಸ್ನಾನ ಮಾಡಿ ಉಪಾಹಾರ ಸೇವಿಸಿ ಮನೆಯಿಂದ ಹೊರಟರೆ ದಿನದ ಕಾರ್ಯಗಳನ್ನು ಪೂರ್ಣಚೈತನ್ಯದಿಂದ ಅತ್ಯುತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ನುಗ್ಗೆ ಸೊಪ್ಪು

ಈ ನುಗ್ಗೆ ಸೊಪ್ಪಿನಲ್ಲಿ ಅಡಗಿರುವ ಲವನಾಂಶಗಳು ಹಾಗೂ ವಿಟಮಿನ್ ಗಳು ಅದೆಷ್ಟೋ ನಿಜ ಹೇಳಬೇಕು ಅಂದರೆ 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿ 300 ಮಿಲಿ ಗ್ರಾಂ ಅಷ್ಟು ಪೊಟ್ಯಾಷಿಯಂ 147 ಮಿಲಿ ಗ್ರಾಂ ಅಷ್ಟು ಮೆಗ್ನೀಷಿಯಂ 185 ಮಿಲಿ ಗ್ರಾಂ ಅಷ್ಟು ಕ್ಯಾಲ್ಸಿಯಂ 110 ಮಿಲಿ ಗ್ರಾಂ ಅಷ್ಟು ಫಾಸ್ಪರಸ್ ಹಾಗೂ ವಿಟಮಿನ್ ಎ ಬಿ ಬಿ2 ಬಿ6 ಹಾಗೆಯೇ ವಿಟಮಿನ್ ಸಿ ಅತೀ ಹೆಚ್ಚಾಗಿ ಇರುತ್ತೆ ಹಾಗಾಗಿ ಈ ಸೊಪ್ಪನ್ನು ಸೂಪರ್ ಆಹಾರ ಎಂದು ಕರೆಯುವುದು.ಇನ್ನೂ ಸರಳವಾಗಿ ಹೇಳಬೇಕು ಅಂದರೆ ಇದರಲ್ಲಿ ಕಿತ್ತಳೆ ಗಿಂತ 6 ಪಟ್ಟು ಹೆಚ್ಚು ವಿಟಮಿನ್ ಸಿ ಇದ್ದರೆ ಹಾಲಿನಲ್ಲಿ ಇರುವುದಕ್ಕಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದೆ ಕ್ಯಾರೆಟ್ ನಲ್ಲಿ ಇರುವುದಕ್ಕಿಂತ 4 ಪಟ್ಟು ಹೆಚ್ಚಿನ ವಿಟಮಿನ್ ಎ ಬಾಳೆಹಣ್ಣಿನಲ್ಲಿ ಇರುವುದಕ್ಕಿಂತ 3 ಪಟ್ಟು ಪೊಟ್ಯಾಷಿಯಂ ಇದೆ ಮೊಸರಿನಲ್ಲಿ ಇರುವುದಕ್ಕಿಂತ ಪ್ರೊಟೀನ್ ಗಿಂತಲೂ 8 ಪಟ್ಟು ಹೆಚ್ಚಿನ ಪ್ರೋಟಿನ್ ಈ ನುಗ್ಗೆ ಸೊಪ್ಪು ಹೊಂದಿದೆ ಹಾಗಿಗಿ ಈ ಸೊಪ್ಪನ್ನು ಸೂಪರ್ ಆಹಾರ ವಿಭಾಗಕ್ಕೆ ಸೇರಿಸಿರುವುದು.

Wednesday, November 20, 2019

ಮೂತ್ರ ರೋಗ ನಿವಾರಣೆ

ಮೂತ್ರ ರೋಗ ನಿವಾರಣೆಗೆ :

♦ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಜೇನುತುಪ್ಪವನ್ನು ಸ್ವಲ್ಪ ಸ್ವಲ್ಪ ಸೇವಿಸುತ್ತಿದ್ದರೆ ಬಹು ಮೂತ್ರ ರೋಗ ಕಡಿಮೆಯಾಗುವುದು.

♦ ಎಳನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಬಹುಮೂತ್ರ ರೋಗ ನಿವಾರಣೆ ಆಗುವುದರ ಜತೆಗೆ ಮೂತ್ರ ವಿಸರ್ಜನೆ ಸಲೀಸಾಗಿ ಆಗುವುದು.

♦ ಬಿಳಿ ದ್ರಾಕ್ಷಿಯನ್ನು ತಿನ್ನುವುದರಿಂದ ಉರಿ ಮೂತ್ರ ರೋಗ ಕಡಿಮೆಯಾಗುವುದು.

♦ ಬಾಳೆಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಸೇರಿಸಿ ಕುಡಿದರೆ ಮೂತ್ರ ವಿಸರ್ಜನೆಯ ಅಡಚಣೆ ನಿವಾರಣೆಯಾಗುವುದು.ಜತೆಗೆ ಮೂತ್ರಕೋಶ, ಮೂತ್ರನಾಳದಲ್ಲಿ ಯಾವ ತೊಂದರೆಯೂ ಉಂಟಾಗದು.

♦ ಚಿಟಿಕೆ ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ, ಎಳನೀರಿನೊಂದಿಗೆ ಕುಡಿದರೆ ಮೂತ್ರ ಕಟ್ಟುವಿಕೆ ಸಡಿಲವಾಗುವುದು.

♦ ಮೊಸರನ್ನಕ್ಕೆ ಬೆಲ್ಲ ಮತ್ತು ಹುರಿದ ಕರಿಮೆಣಸು ಪುಡಿಯನ್ನು ಸೇರಿಸಿ, ಊಟ ಮಾಡುವುದರಿಂದ ಮೂತ್ರ, ಗುದದ್ವಾರದ ಉರಿ ಕಡಿಮೆ ಆಗುವುದಲ್ಲದೆ, ತೊಂದರೆ ಇಲ್ಲದೆ ಮಲ - ಮೂತ್ರ ವಿಸರ್ಜನೆಯಾಗುವುದು.

♦ ಕಬ್ಬಿನ ಹಾಲು, ಎಳನೀರು, ಹಸಿ ಶುಂಠಿ ರಸ, ನಿಂಬೆರಸ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಕುಡಿಯುವುದರಿಂದ ಮೂತ್ರ ಭಾದೆ ಇಲ್ಲದಂತಾಗುವುದು.

♦ ಕುದಿಸಿ ಆರಿಸಿದ ನೀರು ಕುಡಿಯುವುದರಿಂದಲೂ ಉರಿ ಮೂತ್ರ ರೋಗ ನಿವಾರಣೆ ಆಗುವುದು.

ಊರಿ ಮ‌ೂತ್ರ ನಿವಾರಣೆಗೆ

ಒಂದು ಬಟ್ಟಲು ಎಳೇನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಉರಿ ಮ‌ೂತ್ರ ನಿವಾರಣೆ ಆಗುವುದು

ಮೂತ್ರ ವಿಸರ್ಜನೆಗೆ ತೊಂದರೆ ಇದ್ದಾಗ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ ಹಾಲು ಸಕ್ಕರೆ ಬೆರೆಸಿ ಕುಡಿಯಿರಿ.

ಮಳೆಗಾಲದಲ್ಲಿ ಮೆಣಸಿನ ಉಪಯೋಗ ಫಲಕಾರಿ.೧/೨ ಚಮಚ ಉದ್ದಿನ ಬೇಳೆ,೧/೨ ಚಮಚ ಮೆಣಸು ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ ಹಾಕಿ ರುಬ್ಬಿಕೊಳ್ಳಿ. ನೀರಿಗೆ ಹಾಕಿ ಕುದಿಸಿ. ಸ್ವಲ್ಪ ಹಾಲು ಬೆರೆಸಿ ಕುಡಿಯಿರಿ ಅಥವ ಅನ್ನ ಕಲೆಸಿ ತಿನ್ನಿ. ಮೈಯಲ್ಲಿ ಶಾಖ ಉತ್ಪನ್ನ ಮಾಡುತ್ತದೆ ಮತ್ತು ಶೀತವನ್ನು ದೂರವಿಡುತ್ತದೆ.

ನವಣೆಯನ್ನು ನೀರಿನೊಡನೆ ಅರೆದು ಲೇಪಿಸುವುದರಿಂದ ಕೀಲುಗಳ ನೋವು ಕಡಮೆಯಾಗುತ್ತದೆ.
ಕಷಾಯವನ್ನು ಕುಡಿಯುವುದರಿಂದ ಕಟ್ಟು ಮೂತ್ರ ಗುಣವಾಗುತ್ತೆ.

ನಿಂಬೆಗಿಡದ ಬೇರನ್ನು ಮತ್ತು ಹೂವನ್ನು ಅರೆದು ಅಕ್ಕಿ ತೊಳೆದ ನೀರಿನಲ್ಲಿ ಬೆರಸಿ ಕುಡಿಯುವುದರಿಂದ ಮೂತ್ರ ಮಲದ್ವಾರ ಮತ್ತು ಬಾಯಿಯಿಂದ ಬೀಳುವ ರಕ್ತವು ನಿಲ್ಲುತ್ತದೆ.

ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯು (ಉರಿಮೂತ್ರ ತೊಂದರೆ) ಕಂಡುಬಂದರೆ, ಕಲ್ಲಂಗಡಿ ಹಣ್ಣಿನ ರಸವನ್ನು ಮಜ್ಜಿಗೆಯ ಜೊತೆ ಸಮನಾಗಿ ಸೇರಿಸಿ, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದರಿಂದ ತೊಂದರೆಯು ಗುಣವಾಗುತ್ತದೆ.

ಒಂದು ಬಟ್ಟಲು ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸೇವಿಸುವುದರಿಂದ ಜಲಾಂಶದ ಕೊರತೆಯು ನಿವಾರಣೆಯಾಗುತ್ತದೆ.

ಮಲಬದ್ಧತೆಯ ತೊಂದರೆ ಇರುವವರು ಕಲ್ಲಂಗಡಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣಿನ ಜ್ಯೂಸನ್ನು ಸೇವಿಸುವುದರಿಂದ ತೊಂದರೆಯು ಕಡಿಮೆಯಾಗುತ್ತದೆ.

ಉಷ್ಣ ಹೆಚ್ಚಾದರೆ ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ ಕೀವು ತುಂಬಿರುವ ಗುಳ್ಳೆಯಾಗಿದೆ. ಮೊದಲು ಸಣ್ಣ ಗುಳ್ಳೆಯಂತೆ ಬಂದು ದಿನ ದಿನಾ ಹೋದಂತೆ ಕೀವು ತುಂಬಿ ದೊಡ್ಡದಾಗುತ್ತದೆ. ಇದು ಸೋಂಕಿನಿಂದ ಹರಡುವಂತಹ ರೋಗವಾಗಿದೆ.

ಅಷ್ಟೇ ಅಲ್ಲದೆ ಮೂತ್ರ ಹೋಗಲು ಕಷ್ಟವಾಗಿ ಹೋಗುತ್ತದೆ , ಒಮ್ಮೆಮ್ಮೆ ಹೊಟ್ಟೆ ನೋವು ಕಾಣಿಸಿಕೊಂಡರೆ ನರಕ ಯಾತನೆಯನ್ನೇ ಅನುಭವಿಸಬೇಕಾಗುತ್ತದೆ .

ಮುಖದ ಮೇಲೆ ಅನವಶ್ಯಕ ಗುಳ್ಳೆಗಳು ಕಾಣ ತೊಡಗುತ್ತದೆ .
ಮೂತ್ರ ಕಡು ಹಳದಿ ಬಣ್ಣಕ್ಕೆ ತಿರುಗಿ , ಹೆಚ್ಚಾಗಿ ಮೂತ್ರ ಹೊರಗಡೆ ಬಾರದೆ ಒದ್ದಾಡಬೇಕಾಗುತ್ತದೆ .

ಕಸ್ತೂರಿ ಅರಿಶಿನದ ಕೊಂಬನ್ನು ಸ್ವಲ್ಪ ನೀರನ್ನು ಹಾಕಿ ಕಲ್ಲಿನ ಮೇಲೆ ತೇಯಬೇಕು .

ಹೀಗೆ ತೇಯ್ದು ಅರ್ಧ ಚಮಚ ಅರಿಶಿನ ದೊರೆತ ಮೇಲೆ ಒಂದು ಲೋಟಕ್ಕೆ ಈ ಅರಿಶಿನವನ್ನು ಹಾಕಿಕೊಂಡು ಅರ್ಧ ಭಾಗ ನೀರು ತುಂಬಿಸಿ
ನಂತರ ಈ ಮಿಶ್ರಣಕ್ಕೆ ಒಂದು ಚಮಚ ಪುಡಿ ಬೆಲ್ಲವನ್ನು ಬೆರೆಸಿ ಚೆನ್ನಾಗಿ ಕಲಸಿ .

ಹತ್ತು ನಿಮಿಷ ಈ ಮಿಶ್ರಣವನ್ನು ತಟ್ಟೆಯ ಸಹಾಯದಿಂದ ಮುಚ್ಚಿಟ್ಟು ಹಾಗೆಯೇ ಬಿಡಬೇಕು .

ಇದಾದ ನಂತರ ಎರಡು ಹನಿ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕಲಸಿ ಕುಡಿಯಿರಿ ಹೀಗೆ ದಿನಕ್ಕೆ ಬೆಳಗ್ಗೆ ಹಾಗು ಸಂಜೆ ಈ ಮಿಶ್ರಣ ಸೇವಿಸುತ್ತಾ ಬಂದರೆ ಉಷ್ಣ ಸಮಸ್ಯೆ ದೂರವಾಗುತ್ತದೆ .

ಅಷ್ಟೇ ಅಲ್ಲದೆ ನರಗಳ ಊತ , ಮೂಗಿನಲ್ಲಿ ರಕ್ತ ಸೋರುವ ಸಮಸ್ಯೆಗೂ ಇದು ಪರಿಣಾಮಕಾರಿ ಮನೆ ಮದ್ದು‌.

ಇಲ್ಲಿ ಬಹಳ ಟಿಪ್ಸ ಇದೆ
ನಿಮಗೆ ನಿಮ್ಮ ದೇಹಕ್ಕೆ ಹೊಂದಾಣಿಕೆ ಅಗುವ ಮನೆಮದ್ದನ್ನು ಉಪಯೋಗ ಮಾಡಿಕೊಳ್ಳಿ.

ತುಂಬಾ ನೋವಿದ್ದರೆ ಡಾಕ್ಟರ್ ಸಲಹೆ
ಪಡೆದುಕೊಳ್ಳುವುದು ಉತ್ತಮ.

ಡಬಲ್ ಚಿನ್ (ಗಲ್ಲ ಹೆಚ್ಚಾಗಿ ಇರುವುದು) ಸಮಸ್ಯೆ ಇದೆಯೇ.? ಹಾಗಿದ್ದರೆ ಹೀಗೆ ಮಾಡಿ.!*


ಹೆಣ್ಣಾಗಲಿ, ಗಂಡಾಗಲಿ ಮುಖ ಸುಂದರವಾಗಿ ಕಾಣಿಸಬೇಕೆಂದರೆ ಅದರಲ್ಲಿ ಎಲ್ಲಾ ಭಾಗಗಳು ಸರಿಯಾಗಿ ಇರಬೇಕು. ಯಾವುದೇ ಭಾಗ ಸರಿ ಇಲ್ಲ ಎಂದರೆ ಮುಖ ನೋಡಲು ಚೆನ್ನಾಗಿರಲ್ಲ. ಈ ಕ್ರಮದಲ್ಲಿ ದವಡೆ ಕೆಳಗೆ ಇರುವ ಗಲ್ಲ ಸಹ ಮುಖದ ಆಕಾರದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾದ ಗಲ್ಲ ಆದರೆ ಪರವಾಗಿಲ್ಲ. ಆದರೆ ಕೆಲವರಿಗೆ ಡಬಲ್ ಚಿನ್ ಇರುತ್ತದೆ. ಅಂದರೆ ಗಲ್ಲದ ಕೆಳಗೆ ಇನ್ನೊಂದು ಗಲ್ಲ ಎರಡಾಗಿ ಇರುತ್ತದೆ. ಕೆಲವರಿಗೆ ಅದು ಸಾಗಿದಂತೆ ದೊಡ್ಡದಾಗಿರುತ್ತದೆ. ಈ ರೀತಿ ಇದ್ದರೆ ನೋಡಲು ಅಷ್ಟು ಚೆನ್ನಾಗಿರಲ್ಲ. ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಆ ರೀತಿಯ ನೋವಿಲ್ಲದೆ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿದರೆ ಸಾಕು ಡಬಲ್ ಚಿನ್ ದೂರ ಮಾಡಿಕೊಳ್ಳಬಹುದು. ಅದೇಗೆ ಅಂತ ಈಗ ತಿಳಿದುಕೊಳ್ಳೋಣ.




ಶುಗರ್ ಫ್ರೀ ಚ್ಯೂಯಿಂಗ್ ಗಮ್ಸ್:ಚ್ಯೂಯಿಂಗ್ ಗಮ್ಸ್ ಜಗಿಯುವುದರಿಂದ ಬಾಯಿ, ದವಡೆಗೆ ಉತ್ತಮ ವ್ಯಾಯಾಮವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಸಾಮಾನ್ಯವಾಗಿ ಚ್ಯೂಯಿಂಗ್ ಗಮ್ಸ್ ಅಲ್ಲದೆ ಶುಗರ್ ಫ್ರೀ ಚ್ಯೂಯಿಂಗ್ ಗಮ್ಸ್ ಜಗಿಯಬೇಕು. ನಿತ್ಯ ಕನಿಷ್ಟ 4,5 ಸಲ ಹಾಗೆ ಚ್ಯೂಯಿಂಗ್ ಗಮ್ ಜಗಿದರೆ ಕೆಲವು ದಿನಗಳಲ್ಲೇ ಡಬಲ್ ಚಿನ್ ಸಮಸ್ಯೆ ದೂರವಾಗುತ್ತದೆ. ಶುಗರ್ ಫ್ರೀ ಚ್ಯೂಯಿಂಗ್ ಗಮ್ಸ್ ನಿಂದ ನಮಗೆ ಹೆಚ್ಚಿನ ಕ್ಯಾಲರಿಗಳೂ ಸಹ ಸೇರಲ್ಲ.

ಕೋಕೋವಾ ಬಟರ್:ಸ್ವಲ್ಪ ಕೋಕೋವಾ ಬಟರ್ ತೆಗೆದುಕೊಂಡು ಹೆಂಚಿನ ಮೇಲೆ ಬಿಸಿ ಮಾಡಬೇಕು. ಅದನ್ನು ಕುತ್ತಿಗೆ, ಗಲ್ಲದ ಮೇಲೆ ಮಸಾಜ್ ಮಾಡಬೇಕು. ಹೀಗೆ ನಿತ್ಯ ಕನಿಷ್ಟ ಎರಡು ಸಲ ಮಾಡಿದರೂ ಉತ್ತಮ ಫಲಿತಾಂಶ ಪಡೆಯಬಹುದು.

ವೀಟ್ ಜರ್ಮ್ ಆಯಿಲ್:ವೀಟ್ ಜರ್ಮ್ ಆಯಿಲ್ (ಮಾರುಕಟ್ಟೆಯಲ್ಲಿ ದೊರೆಯುತ್ತದೆ) ತೆಗೆದುಕೊಂಡು ಸ್ವಲ್ಪ ಆ ಎಣ್ಣೆಯನ್ನು ಕುತ್ತಿಗೆ, ಗಲ್ಲದ ಭಾಗಗಳಿಗೆ ನಿತ್ಯ ಒಮ್ಮೆ 15 ರಿಂದ 20 ನಿಮಿಷಗಳ ಕಾಲ ಮಸಾಜ್ ಮಾಡಬೇಕು.

ಗ್ಲಿಜರಿನ್:ಒಂದು ಟೇಬಲ್ ಸ್ಫೂನ್ ಗ್ಲಿಜರಿನ್, ಅರ್ಧ ಟೇಬಲ್ ಸ್ಫೂನ್ ಎಪ್ಸಂ ಸಾಲ್ಟ್, ಕೆಲವು ಹನಿ ಪೆಪ್ಪರ್ ಮಿಂಟ್ ಆಯಿಲ್ ತೆಗೆದುಕೊಂಡು ಚೆನ್ನಾಗಿ ಬೆರೆಸಿ ಪೇಸ್ಟ್ ತರಹ ಮಾಡಿಕೊಳ್ಳಬೇಕು. ಇದನ್ನು ಕಾಟನ್ ಬಾಲ್ಸ್ ಸಹಾಯದಿಂದ ಗಲ್ಲಕ್ಕೆ ಅಪ್ಲೈ ಮಾಡಬೇಕು. ಹೀಗೆ ವಾರಕ್ಕೆ 3 ರಿಂದ 5 ಸಲ ಮಾಡಬಹುದು. ಇದರಿಂದ ಡಬಲ್ ಚಿನ್ ನಿವಾರಣೆಯಾಗುತ್ತದೆ.

ಗ್ರೀನ್ ಟೀ:ಅಧಿಕ ತೂಕವನ್ನು, ಕೊಬ್ಬನ್ನು ಕರಗಿಸುವುದಷ್ಟೇ ಅಲ್ಲದೆ ಗ್ರೀ ಟೀ ಡಬಲ್ ಚಿನ್ ಸಮಸ್ಯೆಯನ್ನೂ ದೂರ ಮಾಡುತ್ತದೆ. ನಿತ್ಯ ಒಂದು ಕಪ್ ಗ್ರೀ ಟೀ ಕುಡಿಯುತ್ತಿದ್ದರೆ ಕೆಲವು ದಿನಗಳಲ್ಲೇ ಡಬಲ್ ಚಿನ್ ಸಮಸ್ಯೆ ನಿವಾರಣೆಯಾಗುತ್ತದೆ.

ವಿಟಮಿನ್ ಇ:ಬಾದಾಮಿ, ಮೊಟ್ಟೆ, ವಾಲ್‌ನಟ್ಸ್, ಆಲೀವ್ ಆಯಿಲ್, ಸೌತೆ, ಬೇಬಿ ಕಾರ್ನ್, ಪಾಲಾಕ್, ಸ್ಟ್ರಾಬೆರಿ, ಮೊಳಕೆ ಬೀಜ ಇತ್ಯಾದಿಯನ್ನು ಆಹಾರದ ಭಾಗವಾಗಿ ತೆಗೆದುಕೊಳ್ಳಬೇಕು. ಇದರಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ ಇ ಲಭ್ಯವಾಗುತ್ತದೆ. ಇದರಿಂದ ಡಬಲ್ ಚಿನ್ ಸಮಸ್ಯೆ ಬರಲ್ಲ.

ಹಾಲು:ಸ್ವಲ್ಪ ಹಾಲನ್ನು ತೆಗೆದುಕೊಂಡು ಕುತ್ತಿಗೆ, ಗಲ್ಲದ ಮೇಲೆ ಹಚ್ಚಬೇಕು. ಆ ಬಳಿಕ ಸ್ವಲ್ಪ ಸಮಯ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಹೀಗೆ ನಿತ್ಯ 2 ಸಲ ಮಾಡಿದರೆ ಸ್ವಲ್ಪ ದಿನಗಳಲ್ಲೇ ಡಬಲ್ ಚಿನ್ ಹೋಗುತ್ತದೆ.

ಕರಬೂಜ:ಕರಬೂಜ ಹಣ್ಣಿನ ಜ್ಯೂಸ್ ಮಾಡಿ, ಅದನ್ನು ಕುತ್ತಿಗೆ, ಗಲ್ಲದ ಮೇಲೆ ಹಚ್ಚಬೇಕು. ಆ ಬಳಿಕ 15 ನಿಮಿಷಗಳ ಬಳಿಕ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಸಹ ಡಬಲ್ ಚಿನ್ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಕರಬೂಜ ಹಣ್ಣನ್ನು ಆಹಾರದ ಭಾಗವಾಗಿ ತೆಗೆದುಕೊಂಡರೂ ಫಲಿತಾಂಶ ಸಿಗುತ್ತದೆ.ಮೇಲೆ ತಿಳಿಸಿದ ಟಿಪ್ಸ್ ಜತೆಗೆ ಕೆಳಗಿನ ವಿಡಿಯೋದಲ್ಲಿರುವ ವ್ಯಾಯಾಮವೊಂದನ್ನು ನಿತ್ಯ 5 ನಿಮಿಷಗಳ ಕಾಲ ಮಾಡಿದರೂ ಸಾಕು. ಇದರಿಂದ ಡಬಲ್ ಚಿನ್ ಸಮಸ್ಯೆಯಿಂದ ಹೊರಬರಬಹುದು.

ನೀರಿನ ಚಿಕಿತ್ಸೆ:

ನೀರು ಮಾನವನ ಆಂತರಿಕ ಹಾಗೂ ಬಾಹ್ಯ ಶುದ್ದಿಯಲ್ಲಿ ತುಂಬಾ ಮಹತ್ವದ ಪಾತ್ರವಹಿಸುತ್ತದೆ. ದೇವರು ಸೃಷ್ಟಿಸಿದ ವಸ್ತುಗಳಲ್ಲಿ ನೀರು ನಿರ್ಮಲೀಕರಣದ ಉದ್ದೇಶಕ್ಕಾಗಿ ಅತ್ಯದ್ಭುತವಾಗಿ ಸಹಕಾರಿಯಾಗುವುದು.

ದೇಹಕ್ರಿಯೆಗಳು ಚೆನ್ನಾಗಿ ನಡೆಯಬೇಕಾದರೆ ನೀರಿನ ಅಗತ್ಯವಿದೆ. ನಾವು ಪ್ರತಿದಿನವು 7-8 ಗ್ಲಾಸು ಶುದ್ದವಾದ ನೀರನ್ನು ಕುಡಿಯಲೇಬೇಕು. ಕುದಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯಕರ.

ಶೀತಗೊಳಿಸಿದ ನೀರು ಕುಡಿಯುವುದು ಆರೋಗ್ಯ ದೃಷ್ಠಿಯಿಮದ ಉತ್ತಮವಲ್ಲ. ಬೇಸಿಗೆಯಲ್ಲಿ ಹೆಚ್ಚು ತಣ್ಣಗಿರುವ ನೀರು ಕುಡಿಯುವುದಂತೂ ಅತ್ಯಂತ ಹಾನಿಕರ. ಹೊರಗೂ ಒಳಗೂ ಚೆನ್ನಾಗಿ ತೊಳೆದ ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನವುಂಟು.

ಮಳೆ ನೀರನ್ನು ಭೂಮಿಯ ಮೇಲೆ ಬೀಳುವ ಮೊದಲು ಅಂತರದಿಂದ ಹಿಡಿಯಬೇಕು. ಆ ನೀರು ಶುದ್ದ. ಸ್ವಚ್ಛ, ಲಘು ಮತ್ತು ಸ್ವಾದರಹಿತವಾಗಿದ್ದು, ಮನಸ್ಸಿಗೂ ಜೀವನಕ್ಕೂ ಉತ್ಸಾಹವನ್ನುಂಟು ಮಾಡುತ್ತದೆ,

ನದಿನೀರು ಯಾವಾಗಲೂ ಹರಿಯುತ್ತಿರುವುದರಿಂದ ಹಗುರ, ಕಫ, ಪಿತ್ತನಾಶಕವೂ, ವಾತಕಾರಕವೂ, ಅಗ್ನಿ ದೀಪಕವು ಆಗಿರುತ್ತದೆ. ಬಾವಿಯ ನೀರಿನಲ್ಲಿ ಆಳವಾದ ಸೇದುವ ಬಾವಿಯ ಸಿಹಿ ನೀರು ಆರೋಗ್ಯಕ್ಕೆ ಒಳ್ಳೆಯದು.

ಹೊಟ್ಟೆ ತೊಳಸುವಿಕೆ ಮತ್ತು ವಾಕರಿಕೆ ರೋಗಿಯ ಅನುಭವಕ್ಕೆ ಬಂದಾಗ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರೆ ಶೀಘ್ರ ಗುಣ ಕಂಡು ಬರುವುದು. ಊಳುಕಿರುವ ಅಥವಾ ಪೆಟ್ಟು ಬಿದ್ದು ಊದಿಕೊಂಡಿರುವ ಭಾಗಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ಶಾಂತವಾಗುವುದು.

ಅಪಸ್ಮಾರ ರೋಗಿಯೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ರೋಗಿಯು ಬೆನ್ನು ಮೂಳೆ, ಹಣೆ ಮತ್ತು ನೆತ್ತಿಗೆ ತಣ್ಣೀರು ತಟ್ಟುವುದರಿಂದ ನರಮಂಡಲ ಜಾಗೃತಗೊಳ‍್ಳುವುದು. ದೇಹಾರೋಗ್ಯ ವೃದ್ದಿಯಾಗುವುದು.. ತಲೆಗೆ ತಣ್ಣೀರು ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು. ತಲೆಯಲ್ಲಿ ಹೊಟ್ಟು ಏಳೆಯುವುದಿಲ್ಲ.

ನೆಗಡಿ,ಕಣ್ಣುರಿ ಇದ್ದರೆ ತಲೆಗೆ ಬಿಸಿನೀರಿನ ಸ್ನಾನಮಾಡುವುದರಿಂದ ಗುಣ ಕಂಡು ಬರುವುದು. ಗುಪ್ತಾಂಗಗಳ ಮೇಲೆ ಬಹಳ ಬಿಸಿಯಾದ ನೀರು ಸುರಿಯುವುದರಿಂದ ನಪುಂಸಕತ್ವ ಪ್ರಾಪ್ತವಾಗುವುದು. ಬೆಂಕಿ ಅಥವಾ ನೀರು ತಾಗಿದ ಕೂಡಲೇ ಧಾರಾಳವಾಗಿ ತಣ್ಣೀರನ್ನು ಸುರಿಯುತ್ತಿರಬೇಕು.

ದಿಂಬು ಇದ್ದರೆ ಸುಖ, ಇಲ್ಲದಿದ್ದರೆ ಆರೋಗ್ಯ...ಯಾವುದು ನಿಮ್ಮ ಆಯ್ಕೆ?

ದಿಂಬಿಲ್ಲದೆ ಮಲಗಿದರೆ ಅಭ್ಯಾಸವಾಗುವವರೆಗೆ ನಿಮಗೆ ನಿದ್ದೆ ಬರುವುದು ಕಷ್ಟವಿರಬಹುದು. ಆದರೆ, ದಿಂಬಿಲ್ಲದೆ ಮಲಗುವ ಆರೋಗ್ಯ ಲಾಭಗಳು ಹಲವು. ಅವುಗಳನ್ನು ಅರಿತರೆ ಮತ್ತೆಂದೂ ನೀವು ದಿಂಬನ್ನು ಮುಟ್ಟಲಾರಿರಿ.
ಹಾಸಿಗೆ ಎಂದ ಮೇಲೆ ಅಲ್ಲಿ ದಿಂಬು ಇರಲೇಬೇಕೆಂಬುದು ನಾವು ನಂಬಿಕೊಂಡು ಬಂದಿರುವ ಅಲಿಖಿತ ನಿಯಮ. ಬಾಲ್ಯದಿಂದಲೇ ಅಭ್ಯಾಸ ಮಾಡಿಕೊಂಡಿರುವುದರಿಂದ ದಿಂಬಿಲ್ಲದೆ ಮಲಗುವುದು ಹೇಗೆಂಬ ಕಲ್ಪನೆಯೇ ಬಹುತೇಕರಿಗೆ ಬರದು. ಅಲ್ಲದೆ, ದಿಂಬಿನಲ್ಲಿ ಅಭ್ಯಾಸವಾದವರಿಗೆ ದಿಂಬಿಲ್ಲದೆ ಮಲಗಿದಾಗ ನಿದ್ದೆಯೂ ಬರದು. ಆದರೆ, ಈ ದಿಂಬು ಆರೋಗ್ಯಕ್ಕೆ ಎಷ್ಟೆಲ್ಲ ಸಮಸ್ಯೆ ತರುತ್ತದೆ ಗೊತ್ತೇ? ದಿಂಬಿಲ್ಲದ ಹಾಸಿಗೆ ಹಲವಾರು ಸಮಸ್ಯೆಗಳನ್ನು ತಾನಾಗಿಯೇ ಪರಿಹರಿಸಬಲ್ಲದು. ಅವು ಯಾವುವು ಅಂತ ನೋಡೋಣ.

1. ಬೆನ್ನು ಹಾಗೂ ಕತ್ತು ನೋವು 

ಹೆಚ್ಚಿನ ಜನರು ಬೆನ್ನುನೋವು ಅನುಭವಿಸಲು ಕೆಟ್ಟ ದೇಹಭಂಗಿ ಕಾರಣ. ಹಾಗೆ ಕೆಟ್ಟ ದೇಹಭಂಗಿ ಹೆಚ್ಚು ಕಾಲ ಇರುವುದು ನೀವು ದಿಂಬಿನ ಮೇಲೆ ತಲೆ ಇಟ್ಟು ಮಲಗಿದಾಗ. ಬೆನ್ನುಮೂಳೆಯ ಸಾಮಾನ್ಯ ತಿರುವಿಗೆ ವಿರುದ್ಧವಾದ ದಿಂಬು ಅದನ್ನು ಅಗತ್ಯಕ್ಕಿಂತ ಹೆಚ್ಚು ಬಗ್ಗಿಸುತ್ತದೆ. ಇದರಿಂದ ಬೆನ್ನುಮೂಳೆಯ ಆಕಾರವೇ ಬದಲಾಗಬಹುದು ಮತ್ತು ಬೆನ್ನುನೋವು ನಿಮ್ಮ ಶಾಶ್ವತ ಸಂಗಾತಿಯಾಗಬಹುದು. ಇನ್ನು ದಿಂಬಿನ ಮೇಲೆ ಕತ್ತಿಟ್ಟಾಗ ಅದು ಮೇಲೆ ಬಾಗುತ್ತದೆ. ಹೆಚ್ಚು ಕಾಲ ಇದೇ ರೀತಿ ಇರುವುದರಿಂದ ಕತ್ತು ನೋವು ಕೂಡಾ ಪ್ರತಿದಿನ ಕಾಡಲಾರಂಭಿಸುತ್ತದೆ. ದಿಂಬಿಲ್ಲದಿದ್ದರೆ ದೇಹವು ನೇರವಾಗಿ ಪ್ರಾಕಡತಿಕ ಭಂಗಿಯಲ್ಲಿ ಮಲಗಿರುತ್ತದೆ. ಇದರಿಂದ ಕತ್ತು ಹಾಗೂ ಬೆನ್ನಿನ ಮೂಳೆ, ಸ್ನಾಯುಗಳು ಹೆಚ್ಚು ರಿಲ್ಯಾಕ್ಸ್ ಆಗುತ್ತವೆ. 

2. ಅಲರ್ಜಿ, ಸುಕ್ಕು ಹಾಗೂ ಮೊಡವೆ

ದಿಂಬನ್ನು ಬಳಸಿ ಮಲಗಿದಾಗ ಬಹುತೇಕ ಜನರು ಯಾವುದಾದರೂ ಒಂದು ಬದಿಗೆ ತಿರುಗಿ ಮಲಗುವುದಿದೆ. ದಿಂಬಿನಲ್ಲಿ ಪ್ರತಿದಿನ ನಮ್ಮ ತಲೆಹೊಟ್ಟು, ಮಣ್ಣು, ಜೊಲ್ಲು ಎಲ್ಲವೂ ಸೇರಿಕೊಂಡು ಬ್ಯಾಕ್ಟೀರಿಯಾಗಳ ಆವಾಸಸ್ಥಾನವಾಗಿರುತ್ತದೆ. ಅಂಥ ಕೊಳಕು ದಿಂಬಿಗೆ ಮುಖ ತಾಗಿಸಿ ಮಲಗಿದರೆ ಮೊಡವೆ, ಇನ್ನಿತರೆ ಕಲೆ, ಗುಳ್ಳೆಗಳು ಏಳುವುದು ಸಾಮಾನ್ಯ. ಇನ್ನು ಈ ಬ್ಯಾಕ್ಟೀರಿಯಾಗಳ ಕಾರಣದಿಂದಲೇ ಅಲರ್ಜಿಯಾಗಬಹುದು. ಮುಖದಲ್ಲಿ ಒಂದೇ ಬದಿಗೆ ರಕ್ತ ಸಂಚಲನವಾಗುವುದರಿಂದ ಮತ್ತೊಂದೆಡೆ ಕೊರತೆಯಾಗುತ್ತದೆ. ಇದರಿಂದ ಆ ಭಾಗದಲ್ಲಿ ಬೇಗ ಸುಕ್ಕು ಏಳಬಹುದು.


3. ಮೂಳೆಗಳ ಜೋಡಣೆ

ಪ್ರತಿದಿನ ದಿಂಬಿನ ಮೇಲೆ ಚಿತ್ರವಿಚಿತ್ರ ಭಂಗಿಗಳಲ್ಲಿ ಮಲಗಿಕೊಳ್ಳುವುದರಿಂದ ಮೂಳೆಗಳ ಜೋಡಣೆ ಏರುಪೇರಾಗಿ ಬಿಡಬಹುದು. ಆದರೆ ದಿಂಬಿಲ್ಲದ ಹಾಸಿಗೆಯಲ್ಲಿ ನೇರವಾಗಿ ಮಲಗುವುದರಿಂದ ಮೂಳೆಗಳು ಸರಿಯಾದ ರೀತಿಯಲ್ಲಿ ಜೋಡಣೆಯಿಂದ ದೇಹದ ಆಕಾರ ಚೆನ್ನಾಗಿರುತ್ತದೆ. 

4. ಒತ್ತಡ, ನಿದ್ರಾಹೀನತೆ

ದಿಂಬು ಸರಿಯಾಗಿಲ್ಲದಿದ್ದರೆ, ಅದರ ಎತ್ತರ ಏರು ಅಥವಾ ತಗ್ಗಾಗಿದ್ದರೆ ಅದು ನಿಮ್ಮ ರಾತ್ರಿಯ ನಿದ್ರೆಗೆ ಪದೇ ಪದೆ ಭಂಗ ತರುತ್ತದೆ. ಉತ್ತಮ ನಿದ್ದೆಯಾಗಲಿಲ್ಲವೆಂದರೆ ಬೆಳಗ್ಗೆ ಎಲ್ಲ ಕಿರಿಕಿರಿ ಎನಿಸುತ್ತದೆ. ನಿಧಾನವಾಗಿ ಇದು ಒತ್ತಡಕ್ಕೆ ಕಾರಣವಾಗುತ್ತದೆ. ಆದರೆ, ದಿಂಬಿಲ್ಲದಿದ್ದರೆ ದೇಹದ ನೋವುಗಳೂ ಇಲ್ಲದೆ ಉತ್ತಮ ಗುಣಮಟ್ಟದ ನಿದ್ರೆ ಬರುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ನಿದ್ರೆ ಚೆನ್ನಾಗಾಗುವುದರಿಂದ ಹೆಚ್ಚು ಎನರ್ಜಿಯಿಂದಿರುವಿರಿ.

5. ಸೃಜನಶೀಲತೆ ಹಾಗೂ ನೆನಪಿನ ಶಕ್ತಿ

ಗುಣಮಟ್ಟದ ನಿದ್ರೆ ಜನರ ಕ್ರಿಯೇಟಿವಿಟಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ನಾವು ನಿದ್ರೆ ಮಾಡಿದ ಸಂದರ್ಭದಲ್ಲಿ ನಮ್ಮ ಮೆದುಳು ತಾನು ಪಡೆದ ಎಲ್ಲ ಮಾಹಿತಿಯನ್ನು ಶೇಖರಿಸಿ, ಬೇಕಾದ್ದು ಬೇಡದ್ದುಗಳನ್ನು ನಿರ್ಧರಿಸುತ್ತದೆ. ಚೆನ್ನಾಗಿ ನಿದ್ರೆಯಾದರೆ ಈ ಸಾರ್ಟ್ ಔಟ್ ಕೆಲಸ ಚೆನ್ನಾಗಾಗುತ್ತದೆ. ದಿಂಬಿಲ್ಲದೆ ಅಂಗಾತ ಮಲಗಿದಾಗ ಬರುವ ಗುಣಮಟ್ಟದ ನಿದ್ರೆ ಮಾನಸಿಕ  ಹಾಗೂ ದೈಹಿಕ ಆರೋಗ್ಯವನ್ನು ಹಲವು ರೀತಿಯಲ್ಲಿ ಕಾಪಾಡುತ್ತದೆ. 

6. ಫ್ಲಾಟ್ ಹೆಡ್ ಸಿಂಡ್ರೋಮ್

ಮಗು ನಿಮ್ಮನ್ನು ದಿಂಬಿನಲ್ಲಿ ಮಲಗಿಸುವಂತೆ ಕೇಳುವುದಿಲ್ಲ. ಆದರೂ, ನೀವದನ್ನು ದಿಂಬಿನಲ್ಲಿ ಮಲಗಿಸುತ್ತೀರಿ. ಇದರಿಂದ ಅದರ ಮೆತ್ತಗಿನ ತಲೆ ಒಂದು ಬದಿ ಪೂರ್ತಿ ಫ್ಲ್ಯಾಟ್ ಆಗಿ, ಮತ್ತೊಂದು ಬದಿ ಹಾಗೆ ಎತ್ತರ ಉಳಿಯುವ ಸಾಧ್ಯತೆಗಳು ಹೆಚ್ಚು. ದಿಂಬಿಲ್ಲದೆ ಮಲಗಿಸಿದಾಗ ಈ ಸಮಸ್ಯೆ ತಲೆದೋರುವುದಿಲ್ಲ.

ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...