ನೀರು ಮಾನವನ ಆಂತರಿಕ ಹಾಗೂ ಬಾಹ್ಯ ಶುದ್ದಿಯಲ್ಲಿ ತುಂಬಾ ಮಹತ್ವದ ಪಾತ್ರವಹಿಸುತ್ತದೆ. ದೇವರು ಸೃಷ್ಟಿಸಿದ ವಸ್ತುಗಳಲ್ಲಿ ನೀರು ನಿರ್ಮಲೀಕರಣದ ಉದ್ದೇಶಕ್ಕಾಗಿ ಅತ್ಯದ್ಭುತವಾಗಿ ಸಹಕಾರಿಯಾಗುವುದು.
ದೇಹಕ್ರಿಯೆಗಳು ಚೆನ್ನಾಗಿ ನಡೆಯಬೇಕಾದರೆ ನೀರಿನ ಅಗತ್ಯವಿದೆ. ನಾವು ಪ್ರತಿದಿನವು 7-8 ಗ್ಲಾಸು ಶುದ್ದವಾದ ನೀರನ್ನು ಕುಡಿಯಲೇಬೇಕು. ಕುದಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯಕರ.
ಶೀತಗೊಳಿಸಿದ ನೀರು ಕುಡಿಯುವುದು ಆರೋಗ್ಯ ದೃಷ್ಠಿಯಿಮದ ಉತ್ತಮವಲ್ಲ. ಬೇಸಿಗೆಯಲ್ಲಿ ಹೆಚ್ಚು ತಣ್ಣಗಿರುವ ನೀರು ಕುಡಿಯುವುದಂತೂ ಅತ್ಯಂತ ಹಾನಿಕರ. ಹೊರಗೂ ಒಳಗೂ ಚೆನ್ನಾಗಿ ತೊಳೆದ ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನವುಂಟು.
ಮಳೆ ನೀರನ್ನು ಭೂಮಿಯ ಮೇಲೆ ಬೀಳುವ ಮೊದಲು ಅಂತರದಿಂದ ಹಿಡಿಯಬೇಕು. ಆ ನೀರು ಶುದ್ದ. ಸ್ವಚ್ಛ, ಲಘು ಮತ್ತು ಸ್ವಾದರಹಿತವಾಗಿದ್ದು, ಮನಸ್ಸಿಗೂ ಜೀವನಕ್ಕೂ ಉತ್ಸಾಹವನ್ನುಂಟು ಮಾಡುತ್ತದೆ,
ನದಿನೀರು ಯಾವಾಗಲೂ ಹರಿಯುತ್ತಿರುವುದರಿಂದ ಹಗುರ, ಕಫ, ಪಿತ್ತನಾಶಕವೂ, ವಾತಕಾರಕವೂ, ಅಗ್ನಿ ದೀಪಕವು ಆಗಿರುತ್ತದೆ. ಬಾವಿಯ ನೀರಿನಲ್ಲಿ ಆಳವಾದ ಸೇದುವ ಬಾವಿಯ ಸಿಹಿ ನೀರು ಆರೋಗ್ಯಕ್ಕೆ ಒಳ್ಳೆಯದು.
ಹೊಟ್ಟೆ ತೊಳಸುವಿಕೆ ಮತ್ತು ವಾಕರಿಕೆ ರೋಗಿಯ ಅನುಭವಕ್ಕೆ ಬಂದಾಗ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರೆ ಶೀಘ್ರ ಗುಣ ಕಂಡು ಬರುವುದು. ಊಳುಕಿರುವ ಅಥವಾ ಪೆಟ್ಟು ಬಿದ್ದು ಊದಿಕೊಂಡಿರುವ ಭಾಗಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ಶಾಂತವಾಗುವುದು.
ಅಪಸ್ಮಾರ ರೋಗಿಯೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ರೋಗಿಯು ಬೆನ್ನು ಮೂಳೆ, ಹಣೆ ಮತ್ತು ನೆತ್ತಿಗೆ ತಣ್ಣೀರು ತಟ್ಟುವುದರಿಂದ ನರಮಂಡಲ ಜಾಗೃತಗೊಳ‍್ಳುವುದು. ದೇಹಾರೋಗ್ಯ ವೃದ್ದಿಯಾಗುವುದು.. ತಲೆಗೆ ತಣ್ಣೀರು ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು. ತಲೆಯಲ್ಲಿ ಹೊಟ್ಟು ಏಳೆಯುವುದಿಲ್ಲ.
ನೆಗಡಿ,ಕಣ್ಣುರಿ ಇದ್ದರೆ ತಲೆಗೆ ಬಿಸಿನೀರಿನ ಸ್ನಾನಮಾಡುವುದರಿಂದ ಗುಣ ಕಂಡು ಬರುವುದು. ಗುಪ್ತಾಂಗಗಳ ಮೇಲೆ ಬಹಳ ಬಿಸಿಯಾದ ನೀರು ಸುರಿಯುವುದರಿಂದ ನಪುಂಸಕತ್ವ ಪ್ರಾಪ್ತವಾಗುವುದು. ಬೆಂಕಿ ಅಥವಾ ನೀರು ತಾಗಿದ ಕೂಡಲೇ ಧಾರಾಳವಾಗಿ ತಣ್ಣೀರನ್ನು ಸುರಿಯುತ್ತಿರಬೇಕು.
No comments:
Post a Comment