**
ಬೆಚ್ಚನೆಯ ಶುಂಠಿ, ಕಷಾಯದಲ್ಲಿ ಜೇನು ತುಪ್ಪ ಬೆರೆಸಿ ಸೇವಿಸಿದರೆ ಹಳೆಯ ಜ್ವರ ನಿವಾರಣೆ
ಶುದ್ದ ಜೇನು ತುಪ್ಪದಲ್ಲಿ ಕರಿಮೆಣಸು ಮತ್ತು ಏಲಕ್ಕಿ ಚೂರ್ಣವನ್ನು ಸೇರಿಸಿ ಸೇವಿಸುವುದರಿಂದ ಹಳೆಯ ಜ್ವರ ವಾಸಿಯಾಗುತ್ತದೆ.
ಹಳೆಯ ಜ್ವರದಲ್ಲಿ ಅರ್ಧ ಚಮಚ ಹುರಿದ ಜೀರಿಗೆಯ ಚೂರ್ಣದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಬೇಕು.
ರೋಗಿಯ ತಲೆಯ ಮೇಲೆ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಹಾಕಿ ದೇಹಕ್ಕೆ ಜೇನುತುಪ್ಪ ಲೇಪನ ಮಾಡುವುದರಿಂದ ಉಷ್ಣಜ್ವರ ನಿಯಂತ್ರಣಕ್ಕೆ ಬರುತ್ತದೆ.
ಬದನೆಕಾಯಿಯನ್ನು ಬೆಂಕಿಯಲ್ಲಿ ಸುಟ್ಟು ಅದರ ನಾಲ್ಕು ಚಮಚ ರಸದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಿದರೆ ಉಷ್ಣಜ್ವರ ದೂರವಾಗುವುದು.
ತುಳಸಿ ಮತ್ತು ಪುದೀನಾ ಎಲೆಗಳ ಕಷಾಯ ಸೇವಿಸುವುದರಿಂದ ನಿತ್ಯ ಬರುವ ಜ್ವರ ನಿಲ್ಲುತ್ತದೆ.
12 ಗ್ರಾಂ ನಷ್ಟು ತುಳಸಿಯ ರಸವನ್ನು ನಿತ್ಯ ಸೇವಿಸುವುದರಿಂದ ನಿರಂತರವಾಗಿರುವ ಜ್ವರಾದಿಗಳು ನಿವಾರಣೆಯಾಗುತ್ತವೆ.
3 ಗ್ರಾಂ ತುಳಸಿ ರಸ, 3 ಗ್ರಾಂ ಕರಿಮೆಣಸು, 6 ಗ್ರಾಂ ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಿದರೆ ಜೀರ್ಣ ಜ್ವರ ಕಡಿಮೆಯಾಗುತ್ತದೆ.
ತುಳಸಿ, ಕರಿಮೆಣಸು, ಶುಂಠಿ, ಬೆಲ್ಲ ಇವುಗಳನ್ನು ಸೇರಿಸಿ ಕಷಾಯ ಸಿದ್ದ ಪಡಿಸಿ ಅದರಲ್ಲಿ ನಿಂಬೆ ರಸ ಸೇರಿಸಿ ಸೇವಿಸಿದರೆ ಸಾಮಾನ್ಯ ಜ್ವರ ನಿವಾರಣೆ
ರೋಗಿಗೆ ಗಾಬರಿಯ ಅನುಭವವಾಗುತ್ತಿದ್ದರೆ ತುಳಸಿಯ ಎಲೆಯ ರಸದಲ್ಲಿ ಸಕ್ಕರೆ ಸೇರಿಸಿ ಪಾನಕ ಮಾಡಿ ಸೇವಿಸಲು ಸೂಚಿಸಬೇಕು. ಗಾಬರಿಯೊಡನೆ ಹಳೆಯ ಜ್ವರ ಕೂಡ ದೂರವಾಗುತ್ತದೆ.
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Friday, January 17, 2020
ವಿಭಿನ್ನ ಜ್ವರಗಳಿಗೆ ಮನೆ ಮದ್ದು
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
-
ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ? * ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ...
No comments:
Post a Comment