ಎಳನೀರು ಹಾಗೂ ಟೋಮಾಟೋ ರಸ ಎರಡನ್ನು ಸಮ ಪ್ರಮಾಣದಲ್ಲಿ ಸೇರಿಸಿ ತ್ವಚೆಗೆ ಲೇಪಿಸಿ ಸೌಮ್ಯವಾಗಿ ಮಾಲೀಶ್ ಮಾಡಬೇಕು.
ತೆಂಗಿನೆಣ್ಣಿಯಲ್ಲಿ ಸ್ವಲ್ಪ ಕಡಲೆ ಗಿಡದ ಬೇರನ್ನು ಅರೆದು ಸೇರಿಸಿ ಇದನ್ನು ದಿನದಲ್ಲಿ 4 ರಿಂದ 5 ಬಾರಿ ಕಜ್ಜಿಗಳ ಮೇಲೆ ಲೇಪಿಸಬೇಕು.
ಕಮಲದ ಬೇರನ್ನು ತೆಂಗಿನ ನೀರಿನಲ್ಲಿ ತೇಯ್ದು ಯಥಾ ಸ್ಥಾನದಲ್ಲಿ ಲೇಪಿಸಬೇಕು.
ಕೊಬ್ಬರಿ ಎಣ್ಣೆಗೆ ನಿಂಬೆಯ ರಸ ಸೇರಿಸಿ ಕಜ್ಜಿಗಳಿಗೆ ಲೇಪಿಸುವುದರಿಂದ ಕ್ರಮೇಣವಾಗಿ ಅವು ಒಣಗುತ್ತಾ ಹೋಗುತ್ತದೆ.
ಕೊಬ್ಬರಿ ಎಣ್ಣೆಯಲ್ಲಿ ತುಳಸಿ ಎಲೆಯ ರಸ ಹಾಗೂ ನಿಂಬೆಯ ರಸ ಎರಡನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕಜ್ಜಿಗಳ ಮೇಲೆ ಹಿತ ಕಾಣುವವರೆಗೆ ಲೇಪಿಸುತ್ತಿರಬೇಕು.
ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಬೇವಿನ ಎಲೆಗಳ ಭಸ್ಮವನ್ನು ಸೇರಿಸಿ ಯತಾಸ್ಥಾನದಲ್ಲಿ ಲೇಪಿಸಬೇಕು.
ಸಾಸಿವೆ ಎಣ್ಣೆಯಲ್ಲಿ ಹುರಿದ ಪಟಕದ ಚೂರ್ಣ ಸುಟ್ಟ ಹಸಿ ಶುಂಠಿಯ ಭಸ್ಮ 4 ರಿಂದ 5 ಹಸಿ ಸೀಮೆ ಎಣ್ಣೆ ಇವುಗಳನ್ನು ಸೇರಿಸಿ ಭಾದಿತ ಚರ್ಮದ ಮೇಲೆ ಲೇಪಿಸಬೇಕು.
ಸ್ವಲ್ಪ ಮಲ್ಲಿಗೆ ತೈಲದಲ್ಲಿ ನಿಂಬೆರಸ ಹಾಗೂ ಹಸಿ ಶುಂಠಿಯ ರಸ ಎರಡನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ ಕಜ್ಜಿಗಳ ಮೇಲೆ ಲೇಪಿಸಬೇಕು.
ಬೇವಿನ ಎಣ್ಣೆಯಲ್ಲಿ ಸ್ವಲ್ಪ ಹಸಿ ಶುಂಠಿಯ ರಸ ಸೇರಿಸಿ ಪದೆ ಪದೇ ಲೇಪಿಸುತ್ತಿರಬೇಕು.
ಶುದ್ದ ನೆಲ ಜೇನುತುಪ್ಪ ಕಜ್ಜಿಗಳ ಮೇಲೆ ಮುಲಾಮಿನಂತೆ ಲೇಪಿಸಬಹುದು.
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Thursday, January 9, 2020
ಕಜ್ಜಿಗೆ ಮನೆ ಮದ್ದು
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
No comments:
Post a Comment