Sunday, April 12, 2020

40 ತುಂಬಿದ ಮೇಲೂ ಫಿಟ್ ಆಗಿರಲು 5 ಟಿಪ್ಸ್ ಇಲ್ಲಿವೆ



ಈಗಿನ ಕಾಲದಲ್ಲಿ ಪುರುಷರು ಮತ್ತು ಮಹಿಳೆಯರಿಗೆ 40 ವರ್ಷ ಆದ ನಂತರ ಹಲವಾರು ಗಂಭೀರ ಕಾಯಿಲೆಗಳು 4೦ ವರ್ಷದ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ .ಅರೋಗ್ಯ ಪರೀಕ್ಷೆ ಮತ್ತು ಸಕ್ರಿಯ ಜೀವನ ಶೈಲಿಯಿಂದಾಗಿ ಉತ್ತಮದ ಆರೋಗ್ಯವನ್ನು ನಿರ್ವಹಿಸಕೊಳ್ಳಬಹುದಾಗಿದೆ .



ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಮತ್ತು ಜೀವನದಲ್ಲಿ ಆಗುವ ಒತ್ತಡದ ಸಮಸ್ಯೆಗಳು ಹಾಗೂ ಅನಾರೋಗ್ಯದಿಂದ ಕೂಡಿ ಬಂದ ಹವ್ಯಾಸಗಳು ಈಗಿನ ಕಾಲದ ಹೆಚ್ಚಿನ ಜನರಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಹಾಗೂ ಹೃದಯದ ಗಂಭೀರ ಕಾಯಿಲೆಗಳಂತಹ ಸಮಸ್ಯೆಯಿಂದಾಗಿ ಹೆಚ್ಚಾಗಿ ಜನರು ಬಳಲುತ್ತಿದ್ದಾರೆ. 3೦ವರ್ಷದ ವಯಸ್ಸಿನ ನಂತರ ಸಾಧಾರಣವಾಗಿ ಹೆಲ್ತ್ ಚೆಕ್ ಆಫ್ ಅನ್ನು ಮಾಡಿಸಿಕೊಳ್ಳುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ . 4೦ವರ್ಷದ ವಯಸ್ಸಿನ ನಂತರವು ಕೂಡ ಕಡ್ಡಾಯವಾಗಿ ಪುರುಷರು ಮತ್ತು ಮಹಿಳೆಯರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿಕೊಳ್ಳಬೇಕು. ನಿಯಮತವಾಗಿ ಅರೋಗ್ಯ ಪರೀಕ್ಷೆ ಮಾಡಿಕೊಳ್ಳುವುದರಿಂದ ಯಾವುದೇ ಕಾಯಿಲೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ .

1.ಮನೆಗಳಲ್ಲಿ ಮತ್ತು ಆಫೀಸ್ ಗಳಲ್ಲಿ ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ 4೦ ವರ್ಷದ ವಯಸ್ಸಿನ ನಂತರ ಮಂಡಿ ನೋವು ಮತ್ತು ಬೆನ್ನು ನೋವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ .ಕೆಲವೊಂದು ವ್ಯಾಯಾಮಗಳನ್ನು ಪ್ರತಿದಿನ ಮಾಡುತ್ತಾ ಬಂದರೆ ಈ ಸಮಸ್ಯೆಗಳಿಂದ ಮುಕ್ತಿಹೊಂದಬಹುದು .

2. ಜೀವನಗಳಲ್ಲಿ ನಡೆಯುವ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ .ಇದರ ನಡುವೆ ನಿಮ್ಮಗೆ ಸಲ್ವ ಸಮಯವನ್ನು ಮೀಸಲಿಡಬೇಕು. ಇದರಿಂದ ನಿಮ್ಮ ಮನಸ್ಸು ಮತ್ತು ದೇಹವು ಕೂಡ ಫಿಟ್ ಆಗಿರಲು ಸಾಧ್ಯವಾಗುತ್ತದೆ . ಸೈಕ್ಲಿಂಗ್, ಸ್ವಿಮ್ಮಿಂಗ್ ಮತ್ತು ಆಧುನಿಕವಾದ ದೈಹಿಕ ವ್ಯಾಯಾಮಗಳನ್ನು ದಿನನಿತ್ಯ ಮಾಡುವುದರಿಂದಾಗಿ ರಾತ್ರಿ ಚೆನ್ನಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ . ಜೊತೆಗೆ ಯೋಗ ಹಾಗೂ ಧ್ಯಾನಗಳನ್ನು ಮಾಡುವುದಿಂದಾಗಿ ಮಾನಸಿಕ ಒತ್ತಡಗಳು ಕಡಿಮೆಯಾಗಲು ಸಾಧ್ಯವಾಗುತ್ತದೆ .

3. ರಕ್ತದ ಒತ್ತಡ ಮತ್ತು ಕೊಬ್ಬಿನ ಸಮಸ್ಯೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳವುದು ಸಾಮಾನ್ಯವಾಗಿದೆ . ಜೊತೆಗೆ ಸ್ವಲ್ಪ ವಯಸ್ಸಾದ ನಂತರ ಸ್ಟ್ರೋಕ್ ಮತ್ತು ಹೃದಯಾಘಾತ ಗಳು ಉಂಟಾಗಲು ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಗುತ್ತವೆ , ನಿಯಮಿತವಾಗಿ ಆರೋಗ್ಯವನ್ನು ತಪಾಸಣೆ ಮಾಡಿಸುವುದರಿಂದಾಗಿ ಈ ತೊಂದರೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ .4೦ ವರ್ಷದ ವಯಸ್ಸಿನ ನಂತರ ಪತ್ರಿ 5 ವರ್ಷಕ್ಕೆ ಒಮ್ಮೆ ಕೊಬ್ಬಿನ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

4. 40 ವರ್ಷ ವಯಸ್ಸಿನ ನಂತರ ಮೂಳೆಗಳ ರಂದ್ರ ಕಾಣಿಸಿಕೊಳ್ಳುವುದನ್ನು ಅಸ್ಥಿ ರಂದ್ರತೆ ಎಂದು ಕರೆಯಲಾಗುತ್ತದೆ . ಮೂಳೆಗಳ ತೂಕ ಕಡಿಮೆಯಾಗುತ್ತಾ ಬರುತ್ತದೆ . ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿಂದ ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ . ಹವಾ ನಿಯಂತ್ರಕ ಯಂತ್ರಗಳನ್ನು ಬಳಸುವುದರಿಂದ ಪ್ರತಿ ದಿನ ಸುಮಾರು ಅರ್ಧ ಗಂಟೆಯಷ್ಟು ಕಾಲ ಸೂರ್ಯನಿಗೆ ತಮ್ಮ ದೇಹವನ್ನು ಒಡ್ಡಿ ಕೊಳ್ಳಬೇಕಾಗುತ್ತದೆ.

5 ಬೊಜ್ಜು ಮತ್ತು ಮಧುಮೇಹಗಳ ಸಮಸ್ಯೆ ಆನಾರೋಗ್ಯಕರವಾಗಿದ್ದು ಹಾಗೂ ಆಹಾರ ಪದ್ಧತಿಯಿಂದಾಗಿ ಬರುತ್ತದೆ. 45 ರಿಂದ 65 ವರ್ಷದ ವಯೋಮಾನದವರಿಗೆ ಇದು ಬಹಳ ದೊಡ್ಡ ಸಮಸ್ಯೆಯಾಗಿದೆ . ಸಮತೋಲನದ ಆಹಾರವು ಸಕ್ರಿಯವಾಗಿ ಮತ್ತು ಜೀವನ ಶೈಲಿಯಿಂದಾಗಿ ಈ ಸಮಸ್ಯೆಗಳನ್ನು ದೂರ ಇರಲು ಸಾಧ್ಯವಾಗುತ್ತದೆ , 45 ರ ವಯಸ್ಸಿನ ನಂತರ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ .


No comments:

Post a Comment

ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...