*ಯೋಗ ಸೂತ್ರಗಳು*
ಸಮಾಧಿ ಪಾದ
*೫. ವೃತ್ತಯಃ ಪಂಚತಯ್ಯಃ ಕ್ಲಿಷ್ಟಾಕ್ಲಿಷ್ಟಾಃ*
ವೃತ್ತಿಗಳು ಐದು ವಿಧವಾಗಿದೆ. ಕ್ಲಿಷ್ಟ ಮತ್ತು ಅಕ್ಲಿಷ್ಟ.
ಯೋಗಸಾಧನೆ ಮಾಡಬೇಕಾದರೆ ಚಿತ್ತವೃತ್ತಿಗಳನ್ನು ನಿರೋಧ ಮಾಡಬೇಕು. ಚಿತ್ತವೃತ್ತಿಗಳನ್ನು ನಿರೋಧ ಮಾಡಬೇಕಾದರೆ ಅವುಗಳ ಗುಣ ಸ್ವರೂಪಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಸಂಖ್ಯಾತ ಸಂಖ್ಯೆಯಲ್ಲಿರುವ ವೃತ್ತಿಗಳನ್ನು ಎರೆಡು ಬಗೆಗಳಾಗಿ ವಿಂಗಡಿಸಲಾಗಿದೆ. ಕ್ಲಿಷ್ಟ ಮತ್ತು ಅಕ್ಲಿಷ್ಟ.
ಮನುಷ್ಯನನ್ನು ಅಜ್ಞಾನ, ಅಧರ್ಮ, ನಾಸ್ತಿಕತೆಯ ಕಡೆಗೆ ಕೊಂಡೊಯ್ಯುವ ವೃತ್ತಿಗಳು ಕ್ಲಿಷ್ಟ ಎಂದರೆ ಅವು ದುಃಖವನ್ನು ಉಂಟು ಮಾಡುತ್ತವೆ. ಹಾಗೆಯೇ ಜ್ಞಾನ , ಧರ್ಮ , ಆಸ್ತಿಕತೆಯ ಕಡೆಗೆ ಒಯ್ಯುವ ವೃತ್ತಿಗಳು ಅಕ್ಲಿಷ್ಟ ಅವು ಸುಖವನ್ನು ಉಂಟುಮಾಡುತ್ತವೆ.
ಅವಿದ್ಯೆ, ಅಸ್ಮಿತ, ರಾಗ, ದ್ವೇಷ ಮತ್ತು ಅಭಿನಿವೇಶ ಇವುಗಳು ಪಂಚಕ್ಲೇಶಗಳು. ಅಂದರೆ ಜೀವಾತ್ಮನಿಗೆ ವ್ಯಥೆಯನ್ನು ಮಾಡುತ್ತವೆ. ಈ ಕ್ಲೇಶಗಳು ಯಾವ ವೃತ್ತಿಗಳನ್ನು ಉತ್ಪತ್ತಿಮಾಡುತ್ತವೆಯೋ ಅಂತಹ ವೃತ್ತಿಗಳು ಕ್ಲಿಷ್ಟ ವೃತ್ತಿಗಳಾಗಿರುತ್ತವೆ.
ಅಕ್ಲಿಷ್ಟ ವೃತ್ತಿಗಳ ಮೂಲಕ ಕ್ಲಿಷ್ಟ ವೃತ್ತಿಗಳನ್ನು ನಿರೋಧಿಸಬೇಕು ಹಾಗೂ ಅಕ್ಲಿಷ್ಟ ವೃತ್ತಿಗಳನ್ನು ವೈರಾಗ್ಯದ ಮೂಲಕ ನಿರೋಧಿಸಬೇಕು.
🙏ಹರಿ ಓಂ🙏
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Sunday, April 26, 2020
ಯೋಗ ಸೂತ್ರಗಳು
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
-
ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ? * ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ...
No comments:
Post a Comment