Wednesday, April 22, 2020

What Health information



ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಬೇಯಿಸಿಕೊಂಡು ಕುಡಿದರೆ ಏನಾಗುತ್ತದೆ ಗೊತ್ತಾ?


----------*****-----------

ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ.

1. ಹಾಲಿನಲ್ಲಿ ಬೆಳ್ಳಿಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭಿಸುತ್ತವೆ. ಫ್ಲೇವನಾಡ್ಸ್, ಎಂಜೈಮ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ಮಿನರಲ್‌ಗಳು, ವಿಟಮಿನ್‌ಗಳು ಲಭ್ಯವಾಗುತ್ತವೆ. ವಿಟಮಿನ್ ಎ, ಬಿ1, ಬಿ2, ಬಿ6, ಸಿ ವಿಟಮಿನ್, ಪೊಟ್ಯಾಷಿಯಂ, ಪ್ರೋಟೀನ್, ಕಾಪರ್, ಮ್ಯಾಂಗನೀಸ್, ಫಾಸ್ಪರಸ್, ಜಿಂಕ್, ಸೆಲೇನಿಯಂ, ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳು ಈ ಮಿಶ್ರಣದ ಮೂಲಕ ನಮಗೆ ದೊರೆಯುತ್ತವೆ.

2. ಜ್ವರ ಕಾರಣ ಪ್ಲೇಟ್‍ಲೆಟ್‌ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್‍ಲೆಟ್‌ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ.

3. ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಒಳ್ಳೆಯ ಕೊಲೆಸ್ಟಾರಾಲ್ ಹೆಚ್ಚಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ. ಅದೇನು ಇಲ್ಲದವರಿಗೆ ಭವಿಷ್ಯದಲ್ಲಿ ಬರುವುದಿಲ್ಲ.

4. ಹಲವು ವಿಧದ ಕ್ಯಾನ್ಸರ್‌ಗಳನ್ನು ಗುಣಪಡಿಸುವ ಶಕ್ತಿ ಈ ಮಿಶ್ರಣಕ್ಕಿದೆ. ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿ ಲಭ್ಯವಾಗುವ ಕಾಅಣ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಕ್ಯಾನ್ಸರ್ ಕಣಗಳ ವೃದ್ಧಿ ಕಡಿಮೆಯಾಗುತ್ತದೆ.

5. ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುವ ವೃದ್ದಾಪ್ಯ ಕುರುಹುಗಳು ಬರುವುದಿಲ್ಲ. ಆಂಟಿ ಏಜಿಂಗ್ ಲಕ್ಷಣಗಳು ಧಾರಾಳವಾಗಿ ಇರುವ ಕಾರಣ, ಯೌವ್ವನವಾಗಿ ಕಾಣಿಸುತ್ತಾರೆ.

6. ರಕ್ತದೊತ್ತಡ, ಮಧುಮೇಹ ಹಿಡಿತದಲ್ಲಿರುತ್ತದೆ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಲಿವರ್ ಶುದ್ಧವಾಗುತ್ತದೆ.

7. ಗಾಯಗಳಾಗಿರುವವರು ಈ ಮಿಶ್ರಣವನ್ನು ಕುಡಿದರೆ ಅವು ಶೀಘ್ರದಲ್ಲಿ ಗುಣಮುಖವಾಗುವ ಸಾಧ್ಯತೆಗಳಿವೆ. ಏಕೆಂದರೆ ಈ ಮಿಶ್ರಣದಲ್ಲಿ ಎರಡು ಪಟ್ಟು ಆಂಟಿ ಬಯೋಟಿಕ್ ಲಕ್ಷಣಗಳಿರುತ್ತವೆ.

8. ರಕ್ತ ಗಡ್ಡೆ ಕಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.

9. ಚಯಾಪಚಯ ಪ್ರಕ್ರಿಯೆ ಚುರುಕಾಗುತ್ತದೆ. ಅಧಿಕ ತೂಕ ಇರುವವರಿಗೆ ತೂಕ ಕಡಿಮೆಯಾಗುತ್ತಾರೆ.

10. ಕೆಮ್ಮು, ಜ್ವರದಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಗುಣವಾಗುತ್ತವೆ. ದಂತ ಸಂಬಂಧಿ ಸಮಸ್ಯೆಗಳು ಇದ್ದರೆ ದೂರವಾಗುತ್ತವೆ.

11. ಚರ್ಮಕ್ಕೆ ಆಗಿರುವ ಫಂಗಸ್ ಇನ್‌ಫೆಕ್ಷನ್ ಗುಣವಾಗುತ್ತದೆ. ಚರ್ಮ ಸೌಂದರ್ಯ ಉತ್ತಮಗೊಳ್ಳುತ್ತದೆ. ಮೊಡವೆಗಳು ಬರುವುದಿಲ್ಲ. 12. ಮೂಳೆಗಳು ದೃಢವಾಗುತ್ತವೆ. ಮೂಳೆ ಮುರಿದವರಿಗೆ ಈ ಮಿಶ್ರಣ ಕುಡಿಸಿದರೆ ಅವು ಕೂಡಿಕೊಳ್ಳುವ ಅವಕಾಶ ಇದೆ.


------------****---------


👤👤👤👤👤👥👥👥👥👥👥👤👤👤


ಬಾಣಂತಿಯು ತಿನ್ನುವ ಆಹಾರದಲ್ಲಿ ಕಡಿಮೆ ಕ್ಯಾಲೋರಿ ಇರಬೇಕು. ಹೆಚ್ಚು ನಾರಿನಂಶ ಇರಬೇಕು. ಕಾಳುಗಳ ಸೇವನೆ ಕೂಡ ಅವಶ್ಯ. ಬೇಯಿಸಿದ ತರಕಾರಿ ತಿನ್ನುವುದರಿಂದ ಬೇಗನೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ದೇಹಕ್ಕೆ ಅವಶ್ಯವಾದ ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಅಂಶಗಳು ದೊರಕುತ್ತವೆ. ಮೀನು, ಬೇಳೆಕಾಳು, ಮೊಳಕೆಕಾಳು ಹಾಗೂ ಮೊಟ್ಟೆ ಸೇವಿಸಬೇಕು. ಈ ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

* ಮಗುವಿನ ತಾಯಿಗೆ ಹೆರಿಗೆಯ ನಂತರ ಸಾಕಷ್ಟು ಎನರ್ಜಿಯ ಅಗತ್ಯವಿದೆ. ಹಾಲಿನಿಂದ ಮಾಡಿದ ಆಯ್ದ ತಿನಿಸುಗಳನ್ನು ತಿನ್ನಬಹುದು. ಡ್ರೈ ಪ್ರೂಟ್ ಮಿಲ್ಕ್ ಶೇಕ್ ಕುಡಿಯಬಹುದು.

* ಪಾಲಿಶ್ ಮಾಡಿಲ್ಲದ ಅಕ್ಕಿಯಿಂದ ತಯಾರಿಸಿದ ಇಡ್ಲಿ, ದೋಸಾ ಹಾಗೂ ಬ್ರೆಡ್ ಸ್ಯಾಂಡ್‌ವಿಚ್‌ಗಳನ್ನು ಸೇವಿಸಬಹುದು. ಆ್ಯಂಟಿ ಆಕ್ಸಿಡೆಂಟ್ ಇರುವ ಹಣ್ಣಿನ ರಸಗಳನ್ನು ತಿಂಡಿಯೊಂದಿಗೆ ಸೇವಿಸಬಹುದು.

* ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ನಡುವೆ ಒಂದು ಕಪ್ ಗ್ರೀನ್ ಟೀಯನ್ನು ಸೇವಿಸಬಹುದು. ಇದು ದೇಹ ಹಾಗೂ ಮನಸ್ಸನ್ನು ರಿಫ್ರೆಶ್‌ಗೊಳಿಸುತ್ತದೆ.

* ಬಿಸಿನೀರಿನ ಸ್ನಾನದ ನಂತರ ಬಿಸಿ ಜೀರಿಗೆ ನೀರು ಇಲ್ಲವೇ ಮೆಣಸಿನ ರಸಂ ನಲ್ಲಿ ಅನ್ನವನ್ನು ತಿನ್ನಬಹುದು. ಮಜ್ಜಿಗೆ ಅನ್ನ ಹಾಗೂ ಸಲಾಡ್‌ಗಳು ಎನರ್ಜಿಯನ್ನು ಹೆಚ್ಚಿಸುತ್ತವೆ.

*ಮಗುವಾದ 8 ನೇ ವಾರದ ನಂತರ ವಾಕಿಂಗ್ ಆರಂಭಿಸಬಹುದು. ನಿಧಾನವಾಗಿ ನಡೆಯಬೇಕು. ಮೊದಲಿಗೆ 20 ನಿಮಿಷ ವಾಕಿಂಗ್ ಮಾಡುತ್ತಾ ಬರಬರುತ್ತಾ 30 ನಿಮಿಷದವರೆಗೂ ಮುಂದುವರಿಸಿ.

* ಮಗುವಿನ ಆರೈಕೆಯಲ್ಲೆ ಸಮಯ ಕಳೆದು ಹೋದಲ್ಲಿ, ಮಗು ನಿದ್ರಿಸುವಾಗ ಮುಂದುವರಿಸಿ.

* ಮನೆಯಲ್ಲೆ ನೀವು ವ್ಯಾಯಾಮ ಆರಂಭಿಸಬಹುದು. ಶೋ ಧರಿಸಿ, ಸ್ಪಾಟ್ ವಾಕಿಂಗ್ ಹಾಗೂ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ವ್ಯಾಯಾಮ ಮಾಡಬಹುದು.

* ಸಂಜೆ ವಾಕಿಂಗ್ ಮಾಡಿದ ನಂತರ ಎಳನೀರು, ಕ್ಯಾರೆಟ್ ಜ್ಯೂಸ್, ಕಲ್ಲಂಗಡಿ ಹಣ್ಣು, ಸೌತೆಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು. ಇದು ದೇಹದಲ್ಲಿನ ನೀರಿನಂಶವನ್ನು ಬ್ಯಾಲೆನ್ಸ್ ಮಾಡುತ್ತದೆ.

* ನೀರು ಎಷ್ಟು ಕುಡಿಯುವ ಅಭ್ಯಾಸ ಇರುವುದೋ ಅಷ್ಟು ಉತ್ತಮ.

* ರಾತ್ರಿಯೂಟ ಆದಷ್ಟೂ ಸ್ವಲ್ಪವಿರಬೇಕು. ಸೂಪ್, ಕೊಂಚ ತುಪ್ಪ ಹಾಗೂ ಬಿಸಿ ಅನ್ನ, ಒಂದಿಷ್ಟು ಸೊಪ್ಪು, ಮೊಸರು ಹೊಂದಿರಬೇಕು.

👤👤👤👤👤👤👤👤👤👤👤👤👤👥👤


ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಏಕೆಂದರೆ, ಅವರ ದೇಹವಿನ್ನೂ ಹೊರಗಿನಿಂದ ದಾಳಿ ಇಡುವ ವೈರಾಣುಗಳನ್ನು ನಿಗ್ರಹಿಸುವ, ಹೋರಾಡುವ ಸಾಮರ್ಥ್ಯವನ್ನು ಪಡೆದುಕೊಂಡಿರುವುದಿಲ್ಲ. ಹಾಗಾಗಿಯೇ ಮಕ್ಕಳು ಬೇಗ ರೋಗಗಳಿಗೆ ತುತ್ತಾಗುತ್ತಾರೆ. ಹಾಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಮೂಗಿಗೆ ಸಂಬಂಧಿಸಿದ ಸಮಸ್ಯೆ, ಜ್ವರ ಹಾಗೂ ಎಳೆವೆಯಲ್ಲಿ ಸಾಮಾನ್ಯವಾಗಿ ಕಾಡುವ ಅನಾರೋಗ್ಯ ಮೊದಲಾದವು ಬಾರದಂತೆ ಮುಂಚಿತವಾಗಿಯೇ ತಡೆಯೊಡ್ಡಬೇಕಿದೆ. ಅದರಲ್ಲೂ 5 ವರ್ಷಕ್ಕಿಂತ ಚಿಕ್ಕ ಪ್ರಾಯದ ಮಕ್ಕಳು ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವುದರಿಂದ ಅಂತಹ ಕಂದಮ್ಮಗಳ ಆರೋಗ್ಯ ಕಾಪಾಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಮಕ್ಕಳ ವೈದ್ಯರಲ್ಲಿಗೆ ಮಗುವನ್ನು ಕಾಲಕಾಲಕ್ಕೆ ಕರೆದೊಯ್ದು ಅತ್ಯಗತ್ಯ ಚುಚ್ಚುಮದ್ದುಗಳನ್ನು ಕೊಡಿಸುವ ಮೂಲಕ ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಹೆಚ್ಚಿಸಬೇಕು. ಶ್ವಾಸಕೋಶದ ಉರಿಯೂತ(ನ್ಯುಮೋನಿಯ), ಅತಿಸಾರ(ಡಯೇರಿಯ), ಟೈಫಾಯ್ಡ್(ವಿಷಮಶೀತ ಜ್ವರ), ಜರ್ಮನ್ ಮೀಸಲ್ಸ್(ದಡಾರ), ಮೆನೆಂಜೈಟಿಸ್, ಚಿಕನ್‌ಪಾಕ್ಸ್, ಟೆಟನಸ್(ಧನುರ್ವಾಯು), ಮಂಪ್ಸ್, ಪೋಲಿಯೋ, ಡಿಪ್ತೀರಿಯ, ರೊಟವೈರಸ್, ಹೆಪಟೈಟಿಸ್, ರುಬೆಲ್ಲಾ, ಇನ್‌ಫ್ಲುಯೆಂಜಾ ಮೊದಲಾದ ರೋಗಗಳು ಬಾರದಂತೆ ಅಗತ್ಯವಾದ ಚುಚ್ಚುಮದ್ದು ಹಾಕಿಸುವುದು ಅತ್ಯಗತ್ಯ.






👤👤👤👤👤👤👤👤👤👤👤👤👤

ಆರೋಗ್ಯವೇ ಬಹಳ ಮುಖ್ಯ ಆಸಿಡಿಟಿ :



ಇದು ಬರುವುದು ಬಹಳ ಸುಲಭ. ಇದು ಯಾವುದರಿಂದ ಬರುತ್ತದೆ? ಈ ಆಸಿಡಿಟಿ ಬಂದರೆ ಸಾಕು, ಎಲ್ಲಾ ಖಾಯಿಲೆಗಳಿಗೂ ಆಹ್ವಾನ ಕೊಟ್ಟಂತೆ. ಈ ಆಸಿಡಿಟಿ ಬಹಳ ಅಪಾಯಕಾರಿ ಖಾಯಿಲೆ. ಇದು ಬಂದಾಗ ಜನರೇನು ಮಾಡುತ್ತಾರೆ? ತಕ್ಷಣ ಅಲ್ಲೋಪತಿ ಡಾಕ್ಟರ ಹತ್ತಿರ ಓಡುತ್ತಾರೆ. ಅವರು ಕೊಡುವುದು ಏನನ್ನು ಡೈಜೀನ್ ಎಂಬ ಮಾತ್ರೆಯನ್ನು. ಅದನ್ನು ತೆಗೆದುಕೊಂಡ ತಕ್ಷಣ ಇದು ಮಾಯ. ಆದರೆ ಇದು ಪುನಹ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಈ ಆಸಿಡಿಟಿ ಬರಲು ಕಾರಣ ಏನೆಂದರೆ ಅತಿಯಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು, ಐಸ್ ಕ್ರೀಮ್, ಅತಿಯಾದ ಕಾಫೀ ಸೇವನೆ, ಅತಿ ಎಣ್ಣೆಯ ಸೇವನೆ, ಇತ್ಯಾದಿ ಗಳಿಂದ ಬರುತ್ತದೆ



👤👤👤👤👤👤👤👤👤👤👤👤👤👤👤👤

ಬಾದಾಮಿ ಉತ್ತಮ ಸ್ನಾಕ್ಸ್ ಉದಾಹರಣೆಯೇ ಬಾದಾಮಿ.ಇದರಲ್ಲಿ ವಿಟಮಿನ್ ಇ, ನಾರು ಮತ್ತು ಪ್ರೊಟೀನ್ ಸೇರಿದಂತೆ ಒಟ್ಟು 15 ಪೌಷ್ಟಿಕಾಂಶಗಳು ಇದೆ. ಆದ್ದರಿಂದ ಪ್ರತಿದಿನ 30 ಗ್ರಾಂ ಬಾದಾಮಿ ತಿಂದರೆ ಕೆಟ್ಟ ಕೊಲೆಸ್ಟ್ರಲ್,ಅತಿ ತೂಕ ಮತ್ತು ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತದೆ. ಹಾಗಂತ ರುಚಿಯಲ್ಲಿ ಸಪ್ಪೆಯಾಗಿರುವ ಬಾದಾಮಿಯನ್ನು ಹಾಗೆ ತಿನ್ನಲು ಕೆಲವರಿಗೆ ಇಷ್ಟವಾಗುವುದಿಲ್ಲ.ಆದರೆ ಇದನ್ನು ಆಹಾರದಲ್ಲಿ ಬೇರೆ ಬೇರೆ ರೂಪದಲ್ಲಿ ಸೇವನೆ ಮಾಡಬಹುದು.ಅದು ಹೇಗೆಂದರೆ.

♦ ಮೊಳಕೆಯ ಸಲಾಡ್ ಅಥವಾ ತರಕಾರಿ ಸಲಾಡ್ ಗೆ ಸ್ವಲ್ಪ ಬಾದಾಮಿ ಹಾಕಿ ಸೇವಿಸಿ.

♦ ಮೊಸರಿಗೆ ಬಾದಾಮಿಯ ಪೇಸ್ಟ್ ಹಾಕಿ ಸೇವಿಸಿ.

♦ ಅವಲಕ್ಕಿ ಅಥವಾ ಉಪ್ಪಿಟ್ಟಿನ ಮೇಲೆ ಬಾದಾಮಿಯ ತರಿಯನ್ನು ಉದುರಿಸಿ ತಿನ್ನಿ.

♦ ಪ್ರತಿ ಬಾರಿಯೂ ತೆಂಗಿನಕಾಯಿ ತಿನ್ನುವುದಕ್ಕಿಂತ ಆಗಾಗ ಬಾದಾಮಿ ಚಟ್ನಿ ಮಾಡಿ ಸೇವಿಸಿ.

♦ ರಾತ್ರಿ ಹಳದಿ ಹಾಕಿದ ಹಾಲಿಗಿಂತ ಬಾದಾಮಿ ಹಾಕಿದ ಹಾಲು ಕುಡಿಯಿರಿ.

♦ ಟೋಮೊಟೊ, ಮಶ್ರೂಮ್ ಅಥವಾ ಸ್ವೀಟ್ ಕಾರ್ನ್ ಸೂಪ್ ಗಿಂತ ಬಾದಾಮಿ ಸೂಪ್ ಮಾಡಿ ಕುಡಿಯಿರಿ. ಸಂಗ್ರಹ ಮಾಹಿತಿ 👤👤👤👤👥👥👥👥👥👥👥👥👥👥👥 ಟೋಮೊಟೊ ಫೇಸ್ ಪ್ಯಾಕ್ :

♦ ಗಂಧದ + ಮತ್ತು ಸಿಪ್ಪೆ ಮತ್ತು ಬೀಜ ರಹಿತ ಟೋಮೊಟೊ ತಿರುಳು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಒಂಗಳು ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ವಾರಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ. ಟೋಮೊಟೊದಲ್ಲಿರುವ ಟ್ಯಾನಿನ್ ಗಾಢ ಮೇಲೆನಿನ್ ಕಣಾ ತಿಳಿಯಾಗಿಸುತ್ತದೆ. ಗಂಧ ಚರ್ಮ ಮತ್ತೆ ಸಹಜವರ್ಣ ಪಡೆಯಲು ಸಹಾಯಕ.

♦ ಕೆಲವೇ ದಿನಗಳಲ್ಲಿ ಚರ್ಮದ ಕಾಂತಿ ಹೆಚ್ಚುತ್ತದೆ.

♦ ಮೊಡವೆ ದೂರವಾಗಿಸಿ, ತುರಿಕೆ ಇಲ್ಲವಾಗಿಸುತ್ತದೆ.


♦ ಕೊಲ್ಯಾಜಿನ್ ಹೆಚ್ಚಿಸಿ ಮುಖ ನೆರಿಗೆ ಬೀಳದಂತೆ ತಡೆಯುತ್ತದೆ. ಮಾಹಿತಿ: ಆರೋಗ್ಯ ಮಾಹಿತಿ



👤👤👤👤👤👤👤👤👤👤👤👤👤👤👤 ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ? ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ? ಸರಿಯಾಗಿ ಪೋಷಣೆ ಮಾಡದಿದ್ದರೆ ನಿಮ್ಮ ಕಾಲುಗಳೇ ನಿಮಗೆ ಶತ್ರುವಾಗಬಹುದು. ಅದರಲ್ಲೂ ಮಳೆಗಾಲದಲ್ಲಿ ಹಿಮ್ಮಡಿ ಒಡೆಯುವುದನ್ನು ನಿರ್ಲಕ್ಷಿಸಿದರೆ ಸಹಿಸಲಾರದ ನೋವು. ಒಡೆದ ಹಿಮ್ಮಡಿಯನ್ನು ಮೃದುಗೊಳಿಸುವುದು ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ. ಒಡೆದ ಹಿಮ್ಮಡಿಗೆ ಸಲಹೆಗಳು:


1. ಪ್ಯೂಮಿಕ್ ಸ್ಟೋನ್: ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ ಪ್ಯೂಮಿಕ್ ಸ್ಟೋನ್ ನಿಂದ ಒಣಗಿದ ನಿಮ್ಮ ಹಿಮ್ಮಡಿಗಳನ್ನು ಸ್ನಾನ ಮಾಡುವಾಗ ಸ್ಕ್ರಬ್ ನಂತೆ ಮೃದುವಾಗಿ ಉಜ್ಜಿಕೊಂಡರೆ ನಿರ್ಜೀವ ಕಣಗಳು ತೊಲಗಿ ಪಾದಗಳು ನುಣುಪಾಗುತ್ತದೆ.

2. ಮಾಯಿಶ್ಚರೈಸರ್: ಚರ್ಮ ಒಣಗಲು ಬಿಡದೆ ಪಾದಕ್ಕೆ ಮಾಯಿಶ್ಚರೈಸರನ್ನು ಹಚ್ಚುತ್ತಿದ್ದರೆ ಚರ್ಮ ಮೃದುಗೊಳ್ಳುತ್ತದೆ. ಸಾಕ್ಸ್ ಹಾಕಿಕೊಳ್ಳುವ ಮುನ್ನ ಬಾಡಿ ಲೋಶನ್ ಅಥವಾ ಮಾಯಿಶ್ಚರೈಸರ್ ಲೇಪಿಸಿಕೊಂಡರೆ ಪಾದ ಕೋಮಲವಾಗಿರುತ್ತದೆ. ರಾತ್ರಿ ಹೊತ್ತು ಲೇಪಿಸಿಕೊಂಡು ಮಲಗಿದರೆ ಉತ್ತಮ.

3. ಉಪ್ಪು ನೀರು: ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಮತ್ತು ನಿಂಬೆ ರಸ ಬೆರೆಸಿ 20 ನಿಮಿಷ ಪಾದವನ್ನು ಅದರಲ್ಲಿ ಇಡಬೇಕು. ಉಪ್ಪು ಪಾದವನ್ನು ಮೃದುಗೊಳಿಸಿದರೆ, ನಿಂಬೆ ಕೊಳೆಯನ್ನು ತೊಲಗಿಸುತ್ತದೆ. ಪ್ಯೂಮಿಕ್ ಸ್ಟೋನ್ ನಿಂದ ಮೃದುವಾಗಿ ಉಜ್ಜಿದರೆ ಸ್ವಚ್ಛ ಪಾದ ನಿಮ್ಮದಾಗುತ್ತೆ.

4. ರೊಸ್ ವಾಟರ್: ಗ್ಲಿಸರಿನ್ ಜೊತೆ ರೋಸ್ ವಾಟರ್ ಸೇರಿಸಿ ಅದನ್ನು ಹತ್ತಿಯಿಂದ ಹಚ್ಚಿಕೊಳ್ಳಬೇಕು. ಸುಮಾರು 15 ದಿನ ಈ ನಿಯಮ ಪಾಲಿಸಿದರೆ ಒಡೆದ ಹಿಮ್ಮಡಿ ಬೇಗ ಗುಣಹೊಂದುತ್ತದೆ.

5. ಶೂ ಧರಿಸಿ: ನಿಮ್ಮ ಪಾದಗಳಲ್ಲಿ ತೇವಾಂಶವಿರುವಂತೆ ನೋಡಿಕೊಂಡು ಹಿಮ್ಮಡಿ ಒಡೆಯದಂತಿರಲು ಶೂ ಧರಿಸಿದರೆ ತುಂಬಾ ಉಪಯುಕ್ತ.

6. ನೀರು ಕುಡಿಯಿರಿ: ತುಂಬಾ ಚೆನ್ನಾಗಿ ನೀರು ಕುಡಿದರೆ ದೇಹದೊಂದಿಗೆ ಪಾದವನ್ನೂ ತಣ್ಣಗಿಡುತ್ತದೆ. ಇದು ಹಿಮ್ಮಡಿ ಒಡೆಯದಂತೆ ಒಳಗಿನಿಂದ ರಕ್ಷಣೆ ನೀಡುತ್ತದೆ.

7. ಬಾಳೆಯೊಂದಿಗೆ ಗ್ಲಿಸರಿನ್: ಚೆನ್ನಾಗಿ ಕಳಿತ ಬಾಳೆ ಹಣ್ಣಿಗೆ ಕೆಲವು ಹನಿ ಗ್ಲಿಸರಿನ್ ಬೆರೆಸಿ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಂಡರೆ ಪಾದ ನುಣುಪಾಗಿ ಮಿರುಗುತ್ತದೆ. Topics: ಆರೋಗ್ಯ, ಕಾಲು, heel, foot, health English summary Cracked heels can be a major skin problem if not treated well. The deeper the cracks; the longer it will take to get healed so keep the feet moisturized specially in the winter time. Apart from applying moisturizer before going to bed here are tips to cure cracked heels. Take a look.




👤👤👤👤👤👤👤👤👤👤👤👤👥👥👥👥


*ಡಯಾಬಿಟಿಸ್ ವ್ಯಕ್ತಿಗಳಿಗೆ ಊಟದ ಟೈಮ್ ಟೆಬಲ್*



ಬೆಳಗ್ಗೆ 6 ರಿಂದ 7 ಗಂಟೆಗೆ: ಹಾಲು/ಟೀ/ಕಾಫಿ – 1 ಲೋಟ (ಸಕ್ಕರೆ ಇಲ್ಲದೆ) *ಬೆಳಗ್ಗೆ 8 ರಿಂದ 9 ಗಂಟೆಗೆ: ಇಡ್ಲಿ – 3/ ದೋಸೆ -2/ ಉಪ್ಪಿಟ್ಟು – 1 ಕಪ್ / ಮಂಡಕ್ಕಿ – 1 ಕಪ್/ ಅವಲಕ್ಕಿ – 1 ಕಪ್/ ರಾಗಿ ಗಂಜಿ – 1 ಕಪ್. *ಬೆಳಗ್ಗೆ 11 ಗಂಟೆಗೆ: ನಿಂಬೆ ಜ್ಯೂಸ್ / ಟಮೆಟೊ ಜ್ಯೂಸ್ /(ಸಕ್ಕರೆ ಇಲ್ಲದೆ) – 1 ಕಪ್ / ತರಕಾರಿ ಸಲಾಡ್ – 1 ಕಪ್ / ವೆಜ್ ಸೂಪು – 1 ಕಪ್ / ಮೊಳಕೆ ಕಾಳುಗಳು – ಕಪ್ ಮಧ್ಯಾಹ್ನ 1 ರಿಂದ 2 ಗಂಟೆಗೆ: ಚಪಾತಿ -2 (ಎಣ್ಣೆ ರಹಿತ), ರಾಗಿ ಮುದ್ದೆ – 1 (150 ಗ್ರಾಂ), ಅನ್ನ – 1 ಕಪ್/ ಸಾಂಬರ್ – 1 ಕಪ್ ವೆಜ್ ಸಲಾಡ್ / ಹಸಿರು ತರಕಾರಿ (ಬೀಟ್ ರೂಟ್, ಕ್ಯಾರೆಟ್, ಆಲೂಗಡ್ಡೆಬಿಟ್ಟು), ಕೆನೆಯಿಲ್ಲದ ಮೊಸರು ½ ಕಪ್ / ಕಾಳುಗಳು (ಮಡಕೆ ಕಾಳು, ಹೆಸರು ಕಾಳು ರಾಜ್ಮಾ/ ಕಡ್ಲೆಕಾಳು – 1 ಕಪ್) ಸಂಜೆ 4 ರಿಂದ 5 ಗಂಟೆಗೆ: ಗೋಧಿ ಉಪ್ಪಿಟ್ಟು – 1 ಕಪ್ / ರವಾ ಕಿಚಡಿ – 1ಕಪ್/ ಟೀ/ ಕಾಫಿ/ ಹಾಲು – 1 ಕಪ್ (ಸಕ್ಕರೆ ಇಲ್ಲದೆ)/ ಮಂಡಕ್ಕಿ – 1 ಕಪ್ / ಮೊಳಕೆ ಕಾಳುಗಳು – ಕಪ್. ರಾತ್ರಿ 8 ರಿಂದ 9 ಗಂಟೆ: ಚಪಾತಿ- 2, or  ರಾಗಿ ಮುದ್ದೆ – 1, or ಸಾಂಬರ್ – 1 ಕಪ್, or ವೆಜ್ ಸಲಾಡ್ – 1 ಕಪ್ , or  ಮೊಸರು – ½ ಕಪ್ .


No comments:

Post a Comment

ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...