*ಕೊರೋನ ವೈರಸ್ N-CoV-19 ಎಂಬ ಭಯದ ಬಗ್ಗೆ ತಿಳಿಯಲು ಮತ್ತು ಮುಂಜಾಗ್ರತೆ ವಹಿಸಲು ಈ ಲೇಖನ ನಿಮಗೆ ಸಹಕಾರಿಯಾಗಬಹುದು..*
*ಏನಿದು ಕೊರೋನ ವೈರಸ್ ಅಂದ್ರೆ?*
ಕೊರೋನ ವೈರಸ್ ಅಂದ್ರೆ ಇದು ಯಾವುದೇ ಒಂದು ವೈರಸ್ ನ ಹೆಸರಲ್ಲ ಬದಲಿಗೆ ಇದೊಂದು ಅನೇಕ ವೈರಸ್ ಗಳ ಹೆಸರು..
ಕೆಮ್ಮು, ಶೀತ, ನೆಗಡಿ ಗಳನ್ನು ಸಹ ಒಂದು ರೀತಿಯ ಕೊರೋನ ಎಂದು ಹೇಳಲಾಗುತ್ತದೆ..
2002/2003 ರಲ್ಲಿ *"ಸಾರ್ಸ್"* ಎನ್ನುವ ವೈರಸ್ ಹರಡಿತ್ತು ಅದು ಕೂಡ ಒಂದು ರೀತಿಯ ಕೊರೋನ ವೈರಸ್ ಆಗಿತ್ತು. ಈಗ ಜನಗಳಿಗೆ ತಗುಲುತ್ತಿರುವ ಸೊಂಕು ಸಹ ಹೊಸ ರೀತಿಯ ಕೊರೋನ ವೈರಸ್ ಆಗಿದೆ..
ಈಗ ಬಂದಿರುವ ಸೋಂಕು (ವೈರಸ್) ಚೀನಾ ದೇಶದಲ್ಲಿರುವ *ವುಹಾನ್(Wuhan)* ನಗರದಲ್ಲಿ ಪತ್ತೆಯಾಗಿದ್ದು 31.12.2019 ರಂದು. ಈ ಹೊಸ ತಳಿಯ ಹೆಸರನ್ನು ಇವರು *N-CoV (Noval corona virus)* Noval ಎಂದರೆ ಹೊಸ ಎಂದರ್ಥ.
ಈ ಸೋಂಕಿನ ಹೆಸರು ಇನ್ನೂ ಪತ್ತೆಯಾಗದ ಕಾರಣ ಇದನ್ನು ಈ ಹೆಸರು ಇಡಲಾಗಿದೆ.. ವಾಸ್ತವವಾಗಿ ಕೊರೋನ ವೈರಸ್ ನ ಮೂಲ ಪ್ರಾಣಿಗಳಾಗಿರುತ್ತವೆ. ಆ ನಂತರ ಅದು ಮನುಷ್ಯರಿಂದ ಮನುಷ್ಯರ ಕಾಂಟ್ಯಾಕ್ಟ್ ಮೂಲಕ ಸಾಂಕ್ರಾಮಿಕವಾಗಿ ಹರಡಲು ಶುರುವಾಗುತ್ತದೆ.. 2003 ರಲ್ಲಿ ಬಂದ ಸಾರ್ಸ್ (ವೈರಸ್) ಬಂದಿದ್ದು ಬಾವಲಿ (Bat) ಪಕ್ಷಿಯಿಂದ ಆಗಿತ್ತು.. ಆನಂತರ 2013/14 ರಲ್ಲಿ *ಮೆರ್ಸ್* (MERS) ಎನ್ನುವ ಕೊರೋನ ವೈರಸ್ Middle East ನಲ್ಲಿ ಪತ್ತೆ ಯಾಗಿತ್ತು, ಅದು ಒಂಟೆಯ ಮೂಲಕ ಬಂದಿತ್ತು ಎಂದು ಹೇಳಲಾಗಿತ್ತು. ಆದರೆ ಈಗ ಹರಡಿರುವ ಈ ಸೋಂಕಿನ ನಿಜವಾದ ಮೂಲ ಇನ್ನೂ ತಿಳಿದಿಲ್ಲ.. ಆದರೆ ಕೆಲವು ತಜ್ಞರು ಹೇಳುವ ಪ್ರಕಾರ ಇದರ ಮೂಲ ಹಾವು ಇರಬಹುದು ಅಥವಾ ಬಾವಲಿಯೂ ಇರಬಹುದು, ಏಕೆಂದರೆ ಬಾವಲಿ ಯಿಂದ ಬರುವ ಕೊರೋನ ವೈರಸ್ ಗೂ ಇದಕ್ಕೂ ಸುಮಾರು 96% ಹೋಲಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ..
*ಲಕ್ಷಣಗಳು (Symptoms):*
ಕೆಮ್ಮು, ನೆಗಡಿ, ಶೀತ, ಜ್ವರ, ಗಂಟಲು ನೋವು, ತಲೆನೋವು. ಈ ಮೇಲಿನ ಕಾಲೋಚಿತ ಜ್ವರ (seasonal flu) ಗಳು ನಮಗೆ ಆಗಾಗ್ಗೆ ಬರುತ್ತಲೇ ಇರುತ್ತವೆ.. ಹಾಗಾಗಿ ನಮಗೆ ಕಾಲೋಚಿತವಾಗಿ ಬರುವ ಜ್ವರಗಳು ಯಾವುದು ಮತ್ತು ಈ ಹೊಸ ಕೊರೋನ ಜ್ವರ ಯಾವುದು ಎಂದು ಕಂಡುಹಿಡಿಯುವುದೇ ಕಷ್ಟವಾಗಿದೆ.. ಕೆಲವು ಗಂಭೀರ ಕೇಸ್ ಗಳಲ್ಲಿ ನ್ಯುಮೋನಿಯ ಆಗುವ ಅವಕಾಶಗಳು ಹೆಚ್ಚಿರುತ್ತವೆ ಆಗ ತಕ್ಷಣ ಲ್ಯಾಬೊರೇಟರಿ ಟೆಸ್ಟ್ ಮಾಡಿಸಿ ಅದು ಸಾಮಾನ್ಯವಾಗಿ ಬಂದ ಜ್ವರವೋ ಅಥವಾ ಹೊಸ ಕೊರೋನ ವೈರಸ್ ನ ಲಕ್ಷಣವೋ ಎಂದು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.. ಹೊಸ ಕೊರೋನ ವೈರಸ್ ನ Incubation period ಇರುವುದು 2 ರಿಂದ 11 ದಿನಗಳು, ಅಂದರೆ ಇದು ತಗುಲಿದ ಮೇಲೆ ಇದರ ಲಕ್ಷಣಗಳು ಗೊತ್ತಾಗುವುದಕ್ಕೆ 2 ರಿಂದ 11 ದಿನಗಳು ಬೇಕಾಗುತ್ತವೆ.. ಇದರ ಅರ್ಥ ಇಷ್ಟೇ "ಕಳೆದ ಎರಡು ವಾರಗಳಲ್ಲಿ ನೀವು ಚೀನಾ ಹೋಗಿ ಬಂದಿರದಿದ್ದರೆ, ಅಥವಾ ಯಾವುದೇ ಚೀನಿ ವ್ಯಕ್ತಿಯ ಸಂಪರ್ಕ ಇಲ್ಲದಿದ್ದರೆ ನೀವು ಆತಂಕ ಪಡುವ ಅಗತ್ಯತೆ ಇಲ್ಲ ಯಾಕೆಂದರೆ ನಿಮಗೆ ಬಂದಿರುವ ಜ್ವರ, ಕೆಮ್ಮು,ನೆಗಡಿ ಕಾಲೋಚಿತವಾಗಿ ಬಂದಿದ್ದು ಇರಬಹುದು..
*ಈ ಹೊಸ ಕೊರೋನ ವೈರಸ್ ಎಷ್ಟು ಅಪಾಯಕಾರಿ.:*
ಇಲ್ಲಿಯವರೆಗೂ ಹೊಸ ಕೊರೋನ ವೈರಸ್ ತಗುಲಿರುವುದು 29579 ಮಂದಿಗೆ, ಅದರಲ್ಲಿ ಸತ್ತಿರುವುದು 494, ಮತ್ತು ಕೊರೋನ ತಗುಲಿದ ಮೇಲೂ ಅದರಿಂದ ಗುಣಮುಖರಾಗಿರುವವರು 955.. ಈ ಕೊರೋನ ವೈರಸ್ ಹರಡಿರುವವರ ಸಂಖ್ಯೆಯನ್ನು ಲೆಕ್ಕ ಹಾಕಿದಾಗ, ಮರಣ ಪ್ರಮಾಣದ (Mortality rate) ಅನುಪಾತ ಕೇವಲ 2% ಮಾತ್ರ.. ಮರಣ ಪ್ರಮಾಣದ 2% ಅನುಪಾತ ನೋಡಿದರೆ ಗೊತ್ತಾಗುತ್ತೆ ಈ ಹೊಸ ಕೊರೋನ ವೈರಸ್ ನಿಂದ ಗುಣಮುಖರಾಗುವ ಅವಕಾಶಗಳು 98%, ಹಾಗಾಗಿ ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ.. ಈ ಹೊಸ ಕೊರೋನ ವೈರಸ್ ನಿಂದ ಸತ್ತಿರುವವರ ಸಂಖ್ಯೆಯನ್ನು ಪರಿಶೀಲನೆ ಮಾಡಿದಾಗ ಗೊತ್ತಾಗುವುದು ಇದರಲ್ಲಿ ಭಾಗಶಃ ಜನರು ಸತ್ತಿರುವುದು ಅವರ ರೋಗ ನಿರೋಧಕ (immune power) ಶಕ್ತಿಗಳು ತುಂಬಾ ಕಡಿಮೆ ಇರುವುದರಿಂದ. ಅಂದರೆ ಹೆಚ್ಚಿನ ಸಂಖ್ಯೆಯಲ್ಲಿ ವಯಸ್ಸಾದವರು/ ಅಥವಾ ಬೇರೆ ರೋಗದಿಂದ ಬಳಲುತ್ತಿದ್ದು ಅವರ ರೋಗ ನಿರೋಧಕ ಕಡಿಮೆ ಇದ್ದವರು ಸತ್ತಿರುತ್ತಾರೆ..
ವೈರಸ್ ಗಳ ಇನ್ನೊಂದು ಮುಖ್ಯ ಲಕ್ಷಣಗಳು ಎಂದರೆ.. ಯಾವುದೇ ಹೊಸ ವೈರಸ್ ಗಳು ಹೆಚ್ಚು ಸಾಂಕ್ರಾಮಿಕ ಶಕ್ತಿ ಇದ್ದಷ್ಟು ಅವುಗಳ ಮರಣ ಪ್ರಮಾಣ ಕಡಿಮೆ ಇರುತ್ತದೆ. ಹೆಚ್ಚು ಮರಣ ಪ್ರಮಾಣ ಇದ್ದ ವೈರಸ್ ಗಳ ಸಾಂಕ್ರಾಮಿಕ ಶಕ್ತಿಯು ಕಡಿಮೆ ಪ್ರಮಾಣದಲ್ಲಿ ಇರುತ್ತವೆ..
ಉದಾಹರಣೆಗೆ: *ಎಬೋಲಾ*, ಎಬೋಲಾ ಬಂದರೆ ಅದರಲ್ಲಿ 70% ಸತ್ತುಹೋಗುವ ಅವಕಾಶಗಳು ಇದ್ದವು.. ಎಬೋಲಾ ಬಂದು ಸತ್ತವರ ಸಂಖ್ಯೆ 3400 ಮಾತ್ರ, ಅಂದರೆ ಎಬೋಲಾ ವೈರಸ್ ನ ಸಾಂಕ್ರಾಮಿಕ ಶಕ್ತಿಯು (contagious power) ತುಂಬಾ ಕಡಿಮೆ ಆಗಿತ್ತು.. ಚಿಕನ್ ಫಾಕ್ಸ್ ಮತ್ತು ನೆಗಡಿ ಕೂಡ ತುಂಬಾ ಜಾಸ್ತಿ ಸಾಂಕ್ರಾಮಿಕ ಶಕ್ತಿ ಹೊಂದಿದ್ದು ಇದರ ಮರಣ ಪ್ರಮಾಣ (Mortality rate) ಇರುವುದು 0.01% ಮಾತ್ರ.
*WHO (world health organization)* ಯಾವ ಯಾವ ಸಾಂಕ್ರಾಮಿಕ ರೋಗ ಹೇಗೆ ಹರಡುತ್ತದೆ ಮತ್ತು ಪ್ರತೀ ಸಾಂಕ್ರಾಮಿಕ ರೋಗ ಎಷ್ಟು ಜನರಿಗೆ ಹರಡುವ ಶಕ್ತಿಯನ್ನು ಹೊಂದಿರುತ್ತದೆ ಎಂದು ಗ್ರಾಫ್ ಮಾಡಿರುತ್ತಾರೆ. ಅದರ ಆಧಾರದ ಮೇಲೆ ಹೇಳುವುದಾದರೆ, ಸಾಮಾನ್ಯ ನೆಗಡಿಯು 6 ಜನರಿಗೆ ಮಾತ್ರ ಸಾಂಕ್ರಾಮಿಕವಾಗಿ ಹರಡುವ ಶಕ್ತಿ ಇರುತ್ತದೆ. ಚಿಕನ್ ಫಾಕ್ಸ್ ನ ಸಾಂಕ್ರಾಮಿಕ ಶಕ್ತಿ 8 ಜನರಿಗೆ ಮಾತ್ರ.. ಸಾರ್ಸ್ ನ ಮರಣ ಪ್ರಮಾಣ 10% ಇತ್ತು.. ಆದರೆ ಹೊಸ ಕೊರೋನ ವೈರಸ್ ನ ಮರಣ ಪ್ರಮಾಣ ಇರುವುದು ಕೇವಲ 2% ಮಾತ್ರ ಆದರೆ ಇದರ ಸಾಂಕ್ರಾಮಿಕ ಶಕ್ತಿ ಎಷ್ಟಿದೆ ಎಂಬುದು ಇನ್ನೂ ತಿಳಿದಿಲ್ಲ.. ಆದರೆ ಸಾರ್ಸ್, ಎಬೋಲಾ, ಮೆರ್ಸ್ ವೈರಸ್ ಗಳನ್ನು ಹೋಲಿಕೆ ಮಾಡಿ ನೋಡಿದಾಗ ಈಗ ಬಂದಿರುವ ಕೊರೋನ ಹೆಚ್ಚು ಮಾರಕವಲ್ಲ ಎಂದು ಹೇಳಬಹುದು. ಆದರೆ ಇದರ ಸಾಂಕ್ರಾಮಿಕ ಶಕ್ತಿ (contagious power) ಹೆಚ್ಚಿರಬಹುದು ಎಂದು ಅಂದಾಜು ಮಾಡಬಹುದು..
ಸಾರ್ಸ್ ವೈರಸ್ ಹರಡಲು ಶುರುವಾದಾಗ 8 ತಿಂಗಳಲ್ಲಿ ಪ್ರಪಂಚದಾದ್ಯಂತ 8000 ಜನರಿಗೆ ಹರಡಿತ್ತು.. ಆದರೆ ಈ ಕೊರೋನ ವೈರಸ್ ಈಗಾಗಲೇ 29 ಸಾವಿರ ಜನರಿಗೆ ಹರಡಿರುತ್ತದೆ. ಆದರೆ ಸಾರ್ಸ್ ಗಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕ ಶಕ್ತಿ ಹೊಂದಿದೆ ಎಂದು ಹೇಳಬಹುದು.
Mortality rate ಮರಣ ಪ್ರಾಮಾಣ ಕಡಿಮೆ ಇದೆ ಅಂದ ಮಾತ್ರಕ್ಕೆ ಕಡಿಮೆ ಜನ ಸಾಯುತ್ತಾರೆ ಎಂದರ್ಥವಲ್ಲ, example: 1918 ರಲ್ಲಿ *Spanish flu* ಬಂದಿತ್ತು, ಅದರ mortality rate ಇದ್ದಿದ್ದು ಕೇವಲ 10% ಮಾತ್ರ, ಆದರೆ ಆ ಸಮಯದಲ್ಲಿ ಸುಲಭವಾಗಿ ಸುಮಾರು 500 million ಜನರಿಗೆ ಆ ಸೊಂಕು ಹರಡಿತ್ತು, ಇದರ ಮರಣ ಪ್ರಮಾಣ 10% ಇದ್ದರೂ ಸುಮಾರು 50 ಮಿಲಿಯನ್(5 ಕೋಟಿ) ಜನರು ಇದಕ್ಕೆ ಬಲಿಯಾಗಿದ್ದರು, ಕಾರಣ ಇದರ contagious rate ಹೆಚ್ಚಿತ್ತು..
*ಸೊಂಕು ತಗುಲುವುದು ಹೇಗೆ?*
ಕೆಮ್ಮುವಾಗ, ಸೀನುವಾಗ ಹೇಗೆ ಸೊಂಕು ಇನ್ನೊಬ್ಬರಿಗೆ ಹರಡುತ್ತದೋ ಹಾಗೆಯೇ ಹೊಸ ಕೊರೋನ ವೈರಸ್ ಕೂಡ ಅದೇ ರೀತಿ ಇನ್ನೊಬ್ಬರಿಗೆ ಸಾಂಕ್ರಾಮಿಕವಾಗಿ ಸೀನುವುದರಿಂದ, ಕೆಮ್ಮುವುದರಿಂದ ಒಬ್ಬರ ದೇಹದಿಂದ ಇನ್ನೊಬ್ಬರ ದೇಹಕ್ಕೆ ದ್ರವರೂಪದ ಮುಕಾಂತರ ಹರಡುತ್ತದೆ.
ಇದರಿಂದ ಮುನ್ನೆಚ್ಚರಿಕೆ ವಹಿಸುವ ಕ್ರಮವೆಂದರೆ ಇನ್ನೊಬ್ಬರು ಕೆಮ್ಮುವಾಗ ಅಥವಾ ಸೀನುವಾಗ ಅವರಿಂದ ದೂರ ಇರುವುದು, ಅಥವಾ ಕೆಮ್ಮು, ನೆಗಡಿ ಇದ್ದವರು ಇನ್ನೊಬ್ಬರಿಂದ ದೂರ ಬಂದು ಕೆಮ್ಮುವುದು ಅಥವಾ ಸೀನುವುದು, ತನ್ನ ಎರಡು ಕೈ ಅಡ್ಡಲಾಗಿ ಸೀನುವುದು, ಕೆಮ್ಮುವುದು ಮಾಡಬೇಕು.. WHO ಹೇಳಿರುವ ಪ್ರಕಾರ ಪದೇ ಪದೇ ಹ್ಯಾಂಡ್ ವಾಷ್ ಬಳಸಿ ಕೈ ತೊಳೆದುಕೊಳ್ಳುವುದು, Hand sanitizer ಬಳಸುವುದು, ಸೀನುವಾಗ ಕರ್ಚಿಫ್ ಬಳಸುವುದು, ಸೊಂಕು ಇದ್ದವರು ಮಾಸ್ಕ್ ಬಳಸುವುದು ಉತ್ತಮ.. ಕೆಮ್ಮು ನೆಗಡಿ ಬಂದವರೆಲ್ಲ ಕೊರೋನ ಶಂಕಿತರೆಂದು ಭಾವಿಸಬೇಕಿಲ್ಲ, ಮುನ್ನೆಚ್ಚರಿಕಾ ಕ್ರಮವು ಬೇರೆ ಯಾವುದೇ ರೀತಿಯ ಸೊಂಕು ಹರಡದಿರಲು ಸಹ ಸಹಕಾರಿಯಾಗುತ್ತದೆ.. WHO ಹೇಳಿದೆ ಸೊಂಕು ಹರಡಿರುವ ಶಂಕಿತರನ್ನು ಹೊರತುಪಡಿಸಿ ಬೇರೆಯವರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ..
ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೊರೋನ ವೈರಸ್ ಗುಣಪಡಿಸುವುದರ ಬಗ್ಗೆ ಅನೇಕ ಸುಳ್ಳು ಮಾಹಿತಿಗಳನ್ನು ಹಂಚಲಾಗುತ್ತಿದೆ.. ಉದಾಹರಣೆ: ಚೀನಾದ ಒಬ್ಬ ವೈದ್ಯರು ಹೇಳಿದ್ದಾರೆ ಒಂದು ಬೆಳ್ಳುಳ್ಳಿಯನ್ನು ಚೆನ್ನಾಗಿ ಕುದಿಸಿ ಅದರ ನೀರನ್ನು ಕುಡಿದರೆ ಕೊರೋನ ಗುಣವಾಗುತ್ತದೆ ಮತ್ತು ಹರಡುವುದಿಲ್ಲ ಎನ್ನುವ ಸುಳ್ಳು ಫಾರ್ವರ್ಡ್ ಗಳನ್ನು ಹಂಚಲಾಗುತ್ತಿದೆ.. ಇನ್ನೂ ಕೆಲವರು ಬ್ಲೀಚಿಂಗ್ ಪೌಡರ್ ತಿನ್ನುವುದರಿಂದ, ಇನ್ನೂ ಕೆಲವರು Organic oil ಕುಡಿಯುವುದರಿಂದ ಗುಣವಾಗುತ್ತದೆ ಎಂದು ಹೇಳುತ್ತಿದ್ದಾರೆ ಇದೆಲ್ಲವೂ ಸುಳ್ಳು ಮಾಹಿತಿ.. ನಮ್ಮ ಸರ್ಕಾರ ಹೇಳ್ತಿದೆ ಹೋಮಿಯೋಪತಿ ಮತ್ತು ಆಯುರ್ವೇದದಿಂದ ಗುಣವಾಗುತ್ತದೆಂದು ಇದು ಸಹ ತಪ್ಪು ಸಂದೇಶವಾಗಿದೆ.. ಇನ್ನೂ ಮುಂದಕ್ಕೆ ಹೋಗಿ ಹಿಂದೂ ಮಾಹಾಸಭಾ ದ ಪ್ರಮುಖರೊಬ್ಬರು ಹೇಳುತ್ತಾರೆ ಸಗಣಿ ಮತ್ತು ಗೋಮೂತ್ರ ದಿಂದ ಕೊರೋನ ವೈರಸ್ ಗುಣವಾಗುತ್ತದೆಂದು. ಇವೆಲ್ಲವೂ ಸತ್ಯಕ್ಕೆ ದೂರವಾಗಿದ್ದು ಸಗಣಿ, ಗೋಮೂತ್ರ, ಬ್ಲೀಚ್, ಎಣ್ಣೆ ಕುಡಿಯುವುದರಿಂದ ಏನೂ ಪ್ರಯೋಜನವಿಲ್ಲ.. ಸತ್ಯ ಏನೆಂದರೆ ಇಲ್ಲಿಯವರೆಗೂ ಯಾವುದೇ ಲಸಿಕೆ ಆಗಲಿ ಅಥವಾ ಚಿಕಿತ್ಸೆ ಆಗಲಿ ಕೊರೋನ ವೈರಸ್ ಗಾಗಿ ಕಂಡುಹಿಡಿದಿಲ್ಲ.. ನಿಮ್ಮ ರೋಗನಿರೋಧಕ ಘಟ್ಟಿಯಾಗಿದ್ದರೆ ಮಾತ್ರ ಕೊರೋನ ದೊಂದಿಗೆ ಹೋರಾಡಿ ನೀವು ಗುಣಮುಖರಾಗಬಹುದು.. ಲಸಿಕೆ ಕಂಡುಹಿಡಿಯಲು ತಜ್ಞರು ಪ್ರಯತ್ನದಲ್ಲಿದ್ದಾರೆ ಹಾಗೂ ಇದನ್ನ ಕಂಡುಹಿಡಿಯೋಕೆ ಕನಿಷ್ಠ ಒಂದು ವರ್ಷ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ. 2002/03 ರಲ್ಲಿ ಸಾರ್ಸ್ ವೈರಸ್ ಬಂದಾಗ ಅದರ ಲಸಿಕೆ ಕಂಡುಹಿಡಿಯಲು 20 ತಿಂಗಳು ಹಿಡಿದಿತ್ತು.. ಜಗತ್ತಿನಾದ್ಯಂತ ಎಲ್ಲಾ ದೇಶದ ಸರ್ಕಾರಗಳು ಈ ಹೊಸ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ, ಹಾಗೂ ಅದು ಸಕ್ಸಸ್ ಕೂಡ ಆಗಿದೆ.. ಏಕೆಂದರೆ 99% ಸೊಂಕಿತ ವ್ಯಕ್ತಿಗಳು ಇರುವುದು ಚೀನಾ ದೇಶದಲ್ಲಿ ಮಾತ್ರ, ಅದರಲ್ಲೂ 90% ಸೊಂಕಿತರು ಒಂದೇ ಪ್ರದೇಶ(ಊಹಾನ್)ದಲ್ಲಿ ಇದ್ದಾರೆ. ಚೀನಾ ದೇಶ ಈ ಸೊಂಕಿತ ಪ್ರದೇಶವನ್ನು ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು 5 ಕೋಟಿ ಜನರು ಇರುತ್ತಾರೆ..
ರಷ್ಯಾ, ಮಂಗೋಲಿಯಾ, ಸಿಂಗಾಪುರ್ ಚೀನಾ ದೇಶದಿಂದ ಬರುವ ಪ್ರವಾಸಿಗರನ್ನು ನಿರ್ಬಂಧಿಸಿದ್ದಾರೆ, ಹಾಗೂ ಚೀನಾ ದೇಶದೊಂದಿಗೆ ಗಡಿ ಹಂಚಿಕೊಂಡಿರುವ ಅಷ್ಟೂ ದೇಶಗಳು ಚೀನಾ ಗಡಿಯನ್ನು ಬಂದ್ ಮಾಡಿದ್ದಾರೆ..
ಚೀನಾ ದಿಂದ ಹೊರಗಿರುವ ಯಾರೇ ಆಗಲಿ ಹೆದರುವ ಅವಶ್ಯಕತೆ ಇಲ್ಲ ಆದರೆ ಮುಂಜಾಗ್ರತೆ ವಹಿಸುವುದನ್ನ ಮರೆಯದಿರಿ.. ವಿಪರ್ಯಾಸ ಎಂದರೆ ನಮ್ಮ ಕೆಲವು ಮಾದ್ಯಮಗಳು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರು ಉದ್ದೇಶಪೂರ್ವಕವಾಗಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ.. ಯಾರೂ ಹೆದರುವ ಅವಶ್ಯಕತೆ ಇಲ್ಲ, ಇತರೆ ಕೆಮ್ಮು, ನೆಗಡಿ ಎಂಬ ಸೊಂಕಿನಿಂದ ಹೇಗೆ ಮುಂಜಾಗ್ರತೆ ವಹಿಸುತ್ತೇವೋ ಹಾಗೆಯೇ ಇದಕ್ಕೂ ಮುಂಜಾಗ್ರತೆ ವಹಿಸಿದರೆ ಸಾಕು..
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Sunday, March 15, 2020
ಏನಿದು ಕೊರೋನ ವೈರಸ್ ? ಎಷ್ಟು ಅಪಾಯಕಾರಿ ?
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
-
ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ? * ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ...
No comments:
Post a Comment